ಸಿದ್ದರಾಮಯ್ಯ ಮತ್ತೆ ರೆಬಲ್? ಮಾಜಿ ಸಿಎಂಗೆ ಆಪ್ತರ ಸಾಥ್?
ಮತ್ತೆ ನಾನೇ ಸಿಎಂ ಆಗುತ್ತೇನೆಂದು ಸಿದ್ದರಾಮಯ್ಯ ಹೇಳಿಕೆ ನೀಡಿದ ಬೆನ್ನಲ್ಲೇ ಅತ್ಯಾಪ್ತರೂ ಅವರ ಕೈ ಬಲಪಡಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ವಿದೇಶಕ್ಕೆ ಹೊರಟ ಸಿದ್ದರಾಮಯ್ಯ ಜತೆ ಅವರ ಆಪ್ತರ ತಂಡವೂ ವಿದೇಶಕ್ಕೆ ತೆರಳಲಿದೆ ಎನ್ನಲಾಗಿದೆ.
ಸಮನ್ವಯ ಸಮಿತಿ ಸಭೆ ನಡೆಸಲು ಆಸಕ್ತಿ ತೋರದೇ ಇರುವುದರಿಂದ ಅಸಮಾಧಾನವೆದ್ದಿತ್ತು. ಬಳಿಕ ಕೆಲವರನ್ನು ಸಮನ್ವಯ ಸಮಿತಿಗೆ ಸೇರ್ಪಡೆಗೊಳಿಸುವ ವಿಚಾರದಲ್ಲಿ ಇದೀಗ ಸಿದ್ದರಾಮಯ್ಯ ಬೆಂಬಲಿಗರು ಮತ್ತು ಜೆಡಿಎಸ್ ನಡುವೆ ಅಸಮಾಧಾನ ಭುಗಿಲೆದ್ದಿದೆ ಎನ್ನಲಾಗಿದೆ. ಅಂತೂ ಮತ್ತೆ ಮೈತ್ರಿ ಸರ್ಕಾರದಲ್ಲಿ ಈ ವಿಚಾರ ಹಗ್ಗಜಗ್ಗಾಟಕ್ಕೆ ಕಾರಣವಾಗಿರುವುದು ಸುಳ್ಳಲ್ಲ.