ಲಸಿಕೆಯ ಬಗ್ಗೆ ಮಹತ್ವದ ಮಾಹಿತಿ

ಮಂಗಳವಾರ, 16 ನವೆಂಬರ್ 2021 (11:25 IST)
ನವದೆಹಲಿ : ನಾವು ಹಾಕಿಸಿಕೊಳ್ಳುವ ಯಾವುದೇ ಕೋವಿಡ್ ಲಸಿಕೆ ಖಾಯಂ ಆಗಿ ನಮ್ಮ ದೇಹಕ್ಕೆ ರಕ್ಷಣೆ ಕೊಡೋದಿಲ್ಲ.
ಹಾಗಾದರೆ ಎಷ್ಟು ದಿನ ಎಂದು ನಮ್ಮ ದೇಹವನ್ನು ಕೋವಿಡ್ ವೈರಸ್ನಿಂದ ಕಾಪಾಡುತ್ತದೆ ಎಂಬ ಪ್ರಶ್ನೆ ಸಹಜವಾಗಿಯೇ ಕಾಡುತ್ತದೆ. ಇದಕ್ಕೆ ಯಾರ ಬಳಿಯೂ ಖಚಿತ ಉತ್ತರ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ಸ್ವಾಮಿನಾಥನ್ ಪ್ರಕಾರ, ಕೋವಿಡ್ ಲಸಿಕೆ ನಮ್ಮ ದೇಹದಲ್ಲಿ ಕನಿಷ್ಠ ಒಂದು ವರ್ಷವಾದರೂ ರಕ್ಷಣೆ ಕೊಡಬಲ್ಲುದಂತೆ.

“ವ್ಯಾಕ್ಸಿನ್ನಿಂದ ಸೃಷ್ಟಿಯಾದ ರೋಗನಿರೋಧಕ ಶಕ್ತಿ ದೀರ್ಘ ಕಾಲ ಇರಬಹುದು ಎಂಬ ಸುಳಿವು ಸಿಕ್ಕಿದೆ. ನಮ್ಮ ರಕ್ತದದಲ್ಲಿ ಪ್ರತಿಕಾಯಗಳ ಮಟ್ಟ ಕಡಿಮೆಯಾದರೂ ರೋಗ ನಿರೋಧಕ ಶಕ್ತಿ ಜಾಗೃತವಾಗಿರುತ್ತದೆ. ಆರೋಗ್ಯಯುತ ವಯಸ್ಕರಲ್ಲಿ ಬಹುತೇಕರಿಗೆ ಕನಿಷ್ಠ ಒಂದು ವರ್ಷವಾದರೂ, ಅಥವಾ ಇನ್ನೂ ಹೆಚ್ಚು ಕಾಲ ಲಸಿಕೆ ಒಳ್ಳೆಯ ರಕ್ಷಣೆ ಆಗಬಲ್ಲುದು” ಎಂದು ಡಬ್ಲ್ಯೂಎಚ್ಒ ವಿಜ್ಞಾನಿ ಅಭಿಪ್ರಾಯಪಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ