ಕೊರೋನಾ ಲಸಿಕೆ ಪಡೆದರೆ ಮಾತ್ರ ಭಾರತ-ನ್ಯೂಜಿಲೆಂಡ್ ಟಿ20 ಪಂದ್ಯಕ್ಕೆ ಟಿಕೆಟ್!
ಮೊದಲ ಪಂದ್ಯ ಜೈಪುರದಲ್ಲಿ ನಡೆಯಲಿದ್ದು, ಈ ಪಂದ್ಯಕ್ಕೆ ಮೈದಾನಕ್ಕೆ ಪ್ರವೇಶಿಸಬೇಕಾದರೆ ಕನಿಷ್ಠ ಒಂದು ಕೊರೋನಾ ಲಸಿಕೆ ಪಡೆದುಕೊಂಡಿರಬೇಕು ಎಂದು ರಾಜಸ್ಥಾನ್ ಕ್ರಿಕೆಟ್ ಸಂಸ್ಥೆ ಸೂಚನೆ ನೀಡಿದೆ.
ಬುಧವಾರ ನಡೆಯಲಿರುವ ಪಂದ್ಯಕ್ಕೆ ಈಗಾಗಲೇ ಟಿಕೆಟ್ ಗೆ ಭಾರೀ ಬೇಡಿಕೆ ಬಂದಿದೆ. ಬಹಳ ದಿನಗಳ ಬಳಿಕ ಭಾರತದಲ್ಲಿ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ಕಾರಣಕ್ಕೆ ಅಭಿಮಾನಿಗಳಲ್ಲೂ ಕುತೂಹಲ ಹೆಚ್ಚಿದೆ.