ಗಗನಕ್ಕೇರಿದ ಹೂವು-ಹಣ್ಣಿನ ದರ!

ಶುಕ್ರವಾರ, 5 ಆಗಸ್ಟ್ 2022 (12:37 IST)
ವರಮಹಾಲಕ್ಷ್ಮಿ ಹಬ್ಬದಿಂದಾಗಿ ಹೂ ಹಣ್ಣುಗಳ ಬೆಲೆ ಗಗನಕ್ಕೇರಿದೆ.

ದರೂ ಕೆ.ಆರ್. ಮಾರ್ಕೆಟ್, ಬನಶಂಕರಿ ದೇಗುಲ ಸೇರಿದಂತೆ, ಅಣ್ಣಮ್ಮ, ಮಹಾಲಕ್ಷ್ಮಿ ದೇವಾಲಯಗಳ ಬಳಿ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿತ್ತು.

ಶ್ರಾವಣ ಮಾಸ ಶುರುವಾದ್ರೆ ಸಾಕು ಸಾಲು ಸಾಲು ಹಬ್ಬಗಳು ಎಂಟ್ರಿ ಕೊಡುತ್ತವೆ. ಅದರಲ್ಲೂ ವರಲಕ್ಷ್ಮಿ ಹಬ್ಬ ಅಂದ್ರೆ ಮಹಿಳೆಯ ಪ್ರಿಯವಾದ ಹಬ್ಬ.

ಈ ಹಬ್ಬಕ್ಕೆ ಹೂವು ಪ್ರದಾನ ವಸ್ತುವಾದ್ರೆ, ನಂತರದ ಆದ್ಯತೆ ಹಣ್ಣುಗಳಿಗೆ. ಹೀಗಾಗಿ ಹೂವಿನ ದರದ ಏರಿಕೆಯ ಜೊತೆಗೆ ಹಣ್ಣಿನ ದರವೂ ಏರಿಕೆಯಾಗಿದೆ. ಹಾಗಾದ್ರೆ ಏನೆಲ್ಲಾ ಬೆಲೆ ಏರಿಕೆಯಾಗಿದೆ ಅಂತ ನೋಡೋದಾದ್ರೆ.

ಸೇವಂತಿಗೆ ಹೂವು ಕೆಜಿ – 320 ರೂ., ಮಲ್ಲಿಗೆ ಹಾರ – 1,000 ರೂ., ಗುಲಾಬಿ ಹೂವು ಕೆಜಿ – 320ರಿಂದ 350 ರೂ., ಮಲ್ಲಿಗೆ ಕೆಜಿ – 2,350 ರೂ., ಕಮಲ ಹೂ ಜೋಡಿ 80-100 ರೂ., ಬಟನ್ಸ್ ಹೂವು ಕೆಜಿ – 300 ರೂ., ಮಳ್ಳೆಹೂವು ಕೆಜಿ – 320 ರೂ., ಕನಕಾಂಬರ ಹೂ ಕೆಜಿ – 3,500-4,000 ರೂ.

ಬಾಳೆ ಹಣ್ಣು ಕೆಜಿ – 120ರಿಂದ 150 ರೂ., ಸೀತಾಫಲ ಕೆಜಿ – 200 ರೂ., ಸೇಬು ಕೆಜಿ – 320ರಿಂದ 460 ರೂ., ಮೂಸಂಬಿ ಕೆಜಿ – 130ರಿಂದ 150 ರೂ., ದಾಳಿಂಬೆ ಕೆಜಿ – 320 ರೂ., ದ್ರಾಕ್ಷಿ ಕೆಜಿ – 400 ರೂ., ಅಡಿಕೆ ಎಲೆ 1 ಕಟ್ಟಿಗೆ 100 ರೂ., ಅನಾನಸ್ 1ಕ್ಕೆ 80-100 ರೂ.

ಮಾವಿನ ಎಲೆ 1 ಕಟ್ಟು – 20 ರೂ., ಬಾಳೆ ಕಂಬ – 50 ರೂ., ಬೇವಿನ ಸೊಪ್ಪು 1 ಕಟ್ಟು – 20 ರೂ., ತುಳಸಿ ತೋರಣ 1 ಮಾರು – 50 ರೂ. ಕಳೆದ ಎರಡು ವರ್ಷ ಕೊರೊನಾದಿಂದ ಹಬ್ಬಗಳಿಗೆ ಬ್ರೇಕ್ ಬಿದ್ದಿತ್ತು. ಆದ್ರೆ ಈ ವರ್ಷ ಕೊರೊನಾ ಕಂಟ್ರೋಲ್ ಗೆ ಬಂದಿದ್ದು, ಸಿಲಿಕಾನ್ ಸಿಟಿ ಜನರು ವರಮಹಾಲಕ್ಷ್ಮಿ ಹಬ್ಬಕ್ಕೆ ಜೇಬಿಗೆ ಕತ್ತರಿ ಬಿದ್ರು ಸಹ ಮಾರ್ಕೆಟ್ ನಲ್ಲಿ ಹೂ, ಹಣ್ಣು ಖರೀದಿ ಮಾಡಿ ಹಬ್ಬವನ್ನ ಗ್ರ್ಯಾಂಡ್ ಆಗಿ ಮಾಡ್ತಿದ್ದಾರೆ. ಇದರ ಜೊತೆಗೆ ಮಹಿಳೆಯರಿಗೆ ದೇವಾಲಯಗಳಲ್ಲಿ ಕುಂಕುಮ, ಬಳೆ ನೀಡ್ತೀರೋದು ಸಂತಸದ ವಿಷಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ