SSLC ಪರೀಕ್ಷೆ : ಸಮವಸ್ತ್ರ ಧರಿಸಿದ್ರೆ ಮಾತ್ರ ಪ್ರವೇಶ

ಸೋಮವಾರ, 28 ಮಾರ್ಚ್ 2022 (07:14 IST)
ಬೆಂಗಳೂರು : ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಪ್ರಾರಂಭವಾಗುತ್ತಿದೆ. ಶಿಕ್ಷಣ ಇಲಾಖೆ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ.
 
ಎರಡು ವರ್ಷ ಕೊರೊನಾ ರೌದ್ರತೆಯ ಬಳಿಕ ಪೂರ್ಣ ಪ್ರಮಾಣದಲ್ಲಿ ಹಳೆಯ ಮಾದರಿಯಲ್ಲಿ ಈ ವರ್ಷ ಪರೀಕ್ಷೆ ನಡೆಯುತ್ತಿದೆ.

ಇಂದಿನಿಂದ ಏಪ್ರಿಲ್ 11 ರ ವರೆಗೆ ಪರೀಕ್ಷೆ ನಡೆಯಲಿದೆ. ಕೊರೊನಾ ಕಾರಣಕ್ಕೆ ಕಳೆದ ವರ್ಷ ಎರಡು ದಿನ ಮಾತ್ರ ಪರೀಕ್ಷೆ ನಡೆದಿತ್ತು. 3 ವಿಷಯಗಳು ಸೇರಿ ಒಂದು ಪ್ರಶ್ನೆ ಪತ್ರಿಕೆಯಂತೆ ಎರಡು ಪ್ರಶ್ನೆ ಪತ್ರಿಕೆಯಲ್ಲಿ ನಡೆದಿತ್ತು.

ಆದರೆ ಈ ವರ್ಷ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ 625 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಎಸ್ಎಸ್ಎಲ್ಸಿ ಪರೀಕ್ಷೆಗೆ ಸರ್ಕಾರ ಸಮವಸ್ತ್ರ ನಿಯಮ ಕಡ್ಡಾಯ ಮಾಡಿದೆ. ಎಕ್ಸಾಂಗೆ ಹಿಜಬ್ ನಿಷೇಧ ಮಾಡಿದೆ. ಹೈಕೋರ್ಟ್ ಆದೇಶದ ಮೇಲೆ ಹಿಜಬ್ ಸೇರಿದಂತೆ ಯಾವುದೇ ಧಾರ್ಮಿಕ ಭಾವನೆ ವಸ್ತ್ರಗಳಿಗೆ ಅವಕಾಶ ಇಲ್ಲ. ಸರ್ಕಾರಿ ಶಾಲಾ ಮಕ್ಕಳು ಸರ್ಕಾರ ನಿಗದಿ ಮಾಡಿದ ಸಮವಸ್ತ್ರ ಧರಿಸೋದು ಕಡ್ಡಾಯ ಮಾಡಿದೆ.

ವೇಳಾಪಟ್ಟಿ ಇಂತಿದೆ

>. ಮಾರ್ಚ್ 28-ಪ್ರಥಮ ಭಾಷೆ.
>. ಮಾರ್ಚ್ 30- ದ್ವೀತಿಯ ಭಾಷೆ.
>. ಏಪ್ರಿಲ್ 1- ಕೋರ್ ಸಬ್ಜೆಕ್ಟ್
>. ಏಪ್ರಿಲ್ 4- ಗಣಿತ
>. ಏಪ್ರಿಲ್ 6- ಸಮಾಜ ವಿಜ್ಞಾನ.
>. ಏಪ್ರಿಲ್ 8- ತೃತೀಯ ಭಾಷೆ.
>. ಏಪ್ರಿಲ್ 11- ವಿಜ್ಞಾನ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ