ಕಾಬೂಲ್ : ತಾಲಿಬಾನ್ ವಶಪಡಿಸಿಕೊಂಡ ಬಳಿಕ ಹಾಗೂ ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಅಫ್ಘಾನಿಸ್ತಾನದ ಬಹುತೇಕ ಎಲ್ಲಾ ಪ್ರಮುಖ ಆನ್ಲೈನ್ ಶಾಪಿಂಗ್ ಸೇವೆಗಳು ಸ್ಥಗಿತಗೊಂಡಿರುವುದಾಗಿ ವರದಿಯಾಗಿದೆ.
ಇತ್ತೀಚೆಗೆ ಅಫ್ಘಾನಿಸ್ತಾನದ 2 ಅತಿ ದೊಡ್ಡ ಆನ್ಲೈನ್ ಶಾಪಿಂಗ್ ಸೇವೆಗಳಾದ Click.af ಮತ್ತು Baqal ದೇಶದ ಆರ್ಥಿಕ ಪ್ರಕ್ಷುಬ್ಧತೆಯ ಕಾರಣದಿಂದಾಗಿ ಮುಚ್ಚುವುದಾಗಿ ಘೋಷಿಸಿತ್ತು. ಇದೀಗ ಬಹುತೇಕ ಎಲ್ಲಾ ಆನ್ಲೈನ್ ಶಾಪಿಂಗ್ ಸೇವೆಗಳು ಸ್ಥಗಿತಗೊಂಡಿವೆ.
ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡಾಗಿನಿಂದ ಅಫ್ಘಾನಿಸ್ತಾನ ಈಗ 1 ವರ್ಷದಿಂದ ಸಂಪೂರ್ಣ ಪ್ರಕ್ಷುಬ್ಧ ಸ್ಥಿತಿಯಲ್ಲಿದೆ. ತಾಲಿಬಾನ್ ಲಿಂಗ ಆಧಾರಿತ ಹಿಂಸಾಚಾರವನ್ನು ಪರಿಹರಿಸಲು ವ್ಯವಸ್ಥೆಯನ್ನು ಕಿತ್ತುಹಾಕಿದ್ದು ಮಾತ್ರವಲ್ಲದೇ ಮಹಿಳೆಯರ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೊಸ ಅಡೆತಡೆಗಳನ್ನು ನಿರ್ಮಿಸಿತು.
ಮಹಿಳಾ ಹಕ್ಕುಗಳ ಪ್ರತಿಭಟನಾಕಾರರ ಮೇಲೆ ದಾಳಿಯನ್ನೂ ಮಾಡಿತು. ಆನ್ಲೈನ್ ಶಾಪಿಂಗ್ ಅಪ್ಲಿಕೇಶನ್ ಆಗಿರುವ Click.af ಶನಿವಾರ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.