ಪ್ರಾಣಿಗಳ ವಧೆಗೆ ಸ್ಟನ್ನಿಂಗ್ ಕಡ್ಡಾಯ

ಭಾನುವಾರ, 3 ಏಪ್ರಿಲ್ 2022 (09:21 IST)
ಬೆಂಗಳೂರು : ನಗರದಲ್ಲಿ ಕುರಿ-ಕೋಳಿ ವಧೆಗೆ ಸ್ಟನ್ನಿಂಗ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.

ಹಲಾಲ್ ಆಗಲೀ, ಜಟ್ಕಾವಾಗಲೀ ಸ್ಟನ್ನಿಂಗ್ ರೂಲ್ಸ್ ಪಾಲಿಸಬೇಕು ಎಂದು ಬಿಬಿಎಂಪಿಗೆ ಪಶು ಸಂಗೋಪನಾ ಇಲಾಖೆ ಸೂಚನೆ ನೀಡಿದೆ.

`ಸ್ಟನ್ನಿಂಗ್’ ಅಂದ್ರೆ ಪ್ರಾಣಿವಧೆಗೆ ಮೊದಲು ಪ್ರಜ್ಞೆ ತಪ್ಪಿಸುವುದು. ಪ್ರಜ್ಞೆ ತಪ್ಪಿಸುವುದರಿಂದ ಪ್ರಾಣಿಗೆ ಹೆಚ್ಚು ಹಿಂಸೆಯಾಗುವುದಿಲ್ಲ. ಹಾಗಾಗಿ ಇನ್ಮುಂದೆ ಪ್ರಾಣಿವಧೆಗೂ ಮುನ್ನ ಸ್ಟನ್ನಿಂಗ್ ಕಡ್ಡಾಯಗೊಳಿಸಲಾಗಿದ್ದು, ಸ್ಟನ್ನಿಂಗ್ ಇಲ್ಲದಿದ್ದರೆ ಹೊಸ ಅಂಗಡಿಗಳಿಗೆ ಅನುಮತಿ ಇಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. 

ಸ್ಟನ್ನಿಂಗ್ ಪ್ರಾಣಿವಧೆಯಲ್ಲಿ ಎರಡು ವಿಧಾನಗಳಿದ್ದು, ಪ್ರಜ್ಞೆ ತಪ್ಪಿಸಿ ಪ್ರಾಣಿಗಳ ವಧೆ ಮಾಡುವುದು ಮೊದಲನೇ ವಿಧಾನ. ಮೊದಲನೇ ವಿಧಾನದ ಮೂಲಕ ಪ್ರಾಣಿಯ ತಲೆಗೆ ಬಲವಾಗಿ ಹೊಡೆಯುವುದು.

ತಲೆಗೆ ಬಲವಾಗಿ ಹೊಡೆದ್ರೆ ಪ್ರಜ್ಞೆ ತಪ್ಪಲಿದೆ ಅಥವಾ ತಲೆಗೆ ಹೊಡೆದಾಗ ಮೆದುಳು ನಿಷ್ಕ್ರಿಯವಾಗಲಿದೆ. ಈ ವೇಳೆ ರಕ್ತ ಸೋರಿಕೆ ಆಗದಂತೆ ಪ್ರಾಣಿಗಳ ವಧೆ ಮಾಡುವುದಾಗಿದೆ. ಈ ಮೂಲಕ ಪ್ರಾಣಿವಧೆ ಪರಿಣತರಾದವರು ಮಾತ್ರ ಮಾಡಬಹುದುದಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ