ಚುನಾವಣಾ ಪ್ರಚಾರದಿಂದ ಹಿಂದೆಸರಿದ ನಟ ಸುದೀಪ್

ಬುಧವಾರ, 9 ಮೇ 2018 (14:12 IST)
ಬೆಂಗಳೂರು : ರಾಜ್ಯ ಚುನಾವಣಾ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಅವರು ರಾಜಕೀಯ ನಾಯಕರಾದ ರಾಜುಗೌಡ, ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಅವರ  ಪರವಾಗಿ ಪ್ರಚಾರ ಮಾಡಿದ್ದರು. ಆದರೆ ಇದೀಗ ಅವರು ಇನ್ನು ಮುಂದೆ ಪ್ರಚಾರಕ್ಕೆ ಹೋಗಲ್ಲ ಎಂದು ಬಹಿರಂಗವಾಗಿ ಪತ್ರ ಬರೆದಿದ್ದಾರೆ.


ಸುದೀಪ್ ಅವರು ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದು ಇದು  ಅಭಿಮಾನಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ‘ಸುದೀಪ್ ಅವರನ್ನ ನಾವು ನಟನಾಗಿ ಮಾತ್ರ ನೋಡಲು ಇಷ್ಟಪಡುತ್ತೇವೆ. ಆದ್ರೆ, ನೀವು ಅಭ್ಯರ್ಥಿಗಳ ಪರ ಪ್ರಚಾರ ಮಾಡೋಕೆ ಹೋಗಿದ್ದೀರಾ. ಇದು ತಪ್ಪು. ಹೀಗೆ ಮಾಡಬಾರದಿತ್ತು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದ ಕಾರಣ ನಟ ಸುದೀಪ್ ಅವರು  ಇನ್ನು ಮುಂದೆ ಪ್ರಚಾರಕ್ಕೆ ಹೊಗಲ್ಲ ಎಂದು ಬಹಿರಂಗವಾಗಿ ಪತ್ರ ಬರೆದಿದ್ದಾರೆ.     


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ