ನವದೆಹಲಿ: ಮುಝಾಫರ್ ಬಾಲಿಕಾ ಗೃಹದಲ್ಲಿ ನಡೆದ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಿಹಾರ ಸಿಎಂ ನಿತೀಶ್ ಕುಮಾರ್ ರಕ್ಷಿಸುತ್ತಿದ್ದಾರಾ?
ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಇಂತಹದ್ದೊಂದು ಆರೋಪ ಮಾಡಿದ್ದಾರೆ. ಘಟನೆ ನಡದ ಬಳಿಕವೂ ಇಲ್ಲಿನ ಬಾಲಿಕಾ ಗೃಹದಿಂದ ಓರ್ವ ಬಾಲಕಿ ನಾಪತ್ತೆಯಾಗಿದ್ದಾಳೆ. ಈಕೆ ಎಲ್ಲಿದ್ದಾಳೆಂಬುದು ಬಿಹಾರ ಸಿಎಂಗೆ ಗೊತ್ತು. ಹಾಗಿದ್ದರೂ ಬಾಯಿ ಬಿಡುತ್ತಿಲ್ಲ. ಈ ಮೂಲಕ ಸಿಎಂ ನಿತೀಶ್ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ. ನಾನು ನಿತೀಶ್ ಕುಮಾರ್ ಅವರಿಗೆ ಒಂದು ವಾರದ ಗಡುವು ನೀಡುತ್ತೇನೆ ಎಂದು ತೇಜಸ್ವಿ ಯಾದವ್ ಎಚ್ಚರಿಕೆ ನೀಡಿದ್ದಾರೆ.
ನಮ್ಮ ಮನೆಯ ಹೆಣ್ಣು ಮಕ್ಕಳನ್ನು ರಕ್ಷಿಸುವುದು ನಮ್ಮ ಕರ್ತವ್ಯ. ಒಂದು ವೇಳೆ ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಹೋಗುತ್ತಿರಬೇಕು ಎಂದು ಆರ್ ಜೆಡಿ ನಾಯಕ ತೇಜಸ್ವಿ ಗುಡುಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.