ಟೆಲಿ ಮೆಂಟಲ್ ಕಾರ್ಯಕ್ರಮ ಘೋಷಣೆ!

ಬುಧವಾರ, 2 ಫೆಬ್ರವರಿ 2022 (08:41 IST)
ನವದೆಹಲಿ :  ಕಳೆದೆರಡು ವರ್ಷದಿಂದ ಸತತವಾಗಿ ಕಾಡುತ್ತಿರುವ ಕೊರೋನಾ ಸಮಸ್ಯೆ ಜನರಲ್ಲಿ ಹಲವು ಇತರ ಸಮಸ್ಯೆಗಳಿಗೆ ಕಾರಣವಾಗಿದೆ.
 
ಇದರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಪ್ರಮುಖವಾಗಿದೆ. ಕಳೆದೆರಡು ವರ್ಷದಲ್ಲಿ ಕೊರೋನಾದಿಂದ ಮಾನಸಿಕವಾಗಿ ಕುಗ್ಗಿಹೋದವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಜನರಲ್ಲಿ ಕೊರೋನಾ ಸಾಂಕ್ರಾಮಿಕ ಅವಧಿಯಲ್ಲಿ ಹೊರಹೊಮ್ಮಿದ ಮಾನಸಿಕ ಆರೋಗ್ಯ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಬಜೆಟ್ನಲ್ಲಿ ವಿಶೇಷ ಕಾರ್ಯಕ್ರಮ ಘೋಷಿಸಲಾಗಿದೆ.

ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆ ಜೊತೆ ಸೇರಿ ಕೇಂದ್ರ ಈ ಮಾನಸಿಕ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಿದೆ.  ಸಂತತ್ತಿನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ನಲ್ಲಿ ಆರೋಗ್ಯ ಕ್ಷೇತಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಮೂಲಭೂತ ಸೌಕರ್ಯಗಳ ಜೊತೆಗೆ ಮಾನಸಿಕ ಆರೋಗ್ಯ ಸಮಸ್ಯೆ ನಿವಾರಿಸಲು ನಿಮ್ಹಾನ್ಸ್ ಆಸ್ಪತ್ರೆ ಜೊತೆ ರಾಷ್ಟ್ರೀಯ ಟೆಲಿ-ಮೆಂಟಲ್ ಆರೋಗ್ಯ ಕ್ರಾರ್ಯಕ್ರಮ ಆರಂಭಿಸುವುದಾಗಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದು ದೂರವಾಣಿ ಕಾರ್ಯಕ್ರಮವಾಗಿದ್ದು, ನಿಮ್ಹಾನ್ಸ್ ಜೊತೆ ಐಐಐಟಿಬಿ ಜಂಟಿಯಾಗಿ ಕಾರ್ಯನಿರ್ವಹಿಸಲಿದೆ.

ಕೊರೋನಾ ವಕ್ಕರಿಸಿದ ಬಳಿಕ ದೇಶದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ, ಬಜೆಟ್ನಲ್ಲಿ ವಿಶೇಷ ಕಾರ್ಯಕ್ರಮ ಘೋಷಿಸುವ ಮೂಲಕ ದೇಶದ ಜನರ ಆರೋಗ್ಯದ ಕುರಿತು ಒತ್ತು ನೀಡಿದೆ. 

ಸಾಂಕ್ರಾಮಿಕ ರೋಗವು ಎಲ್ಲಾ ವಯಸ್ಸಿನ ಜನರಲ್ಲಿಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಿದೆ. ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳ ಪ್ರವೇಶವನ್ನು ಉತ್ತಮಗೊಳಿಸಲು, ‘ರಾಷ್ಟ್ರೀಯ ದೂರವಾಣಿ ಮಾನಸಿಕ ಆರೋಗ್ಯ ಕಾರ್ಯಕ್ರಮ’ವನ್ನು ಪ್ರಾರಂಭಿಸಲಾಗುವುದು. ಎಂದು  ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ