ಹೇಗಿರಬಹುದು ನಿರ್ಮಲಾ ಬಜೆಟ್?

ಮಂಗಳವಾರ, 1 ಫೆಬ್ರವರಿ 2022 (08:25 IST)
ನವದೆಹಲಿ : 2022-23ನೇ ಸಾಲಿನ ಕೇಂದ್ರ ಬಜೆಟ್‍ಗೆ ಕ್ಷಣಗಣನೆ ಶುರುವಾಗಿದೆ.


ಇಂದು ಬೆಳಗ್ಗೆ 11 ಗಂಟೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ 4ನೇ ಬಜೆಟ್ ಮಂಡಿಸಲಿದ್ದಾರೆ.

 
* ದೀರ್ಘಕಾಲಿಕ ಯೋಜನೆಗಳಿಗೆ ಹೆಚ್ಚು ಆದ್ಯತೆ
* ಗ್ರಾಮೀಣ ಜನತೆಗೆ ಹತ್ತಿರವಾಗುವ ಅಂಶ ಇರಬಹುದು. ಕೃಷಿ ಕಾಯ್ದೆ ವಿವಾದ ಹಾಗೂ ಪಂಚ ರಾಜ್ಯ ಚುನಾವಣೆಗಳ ಹಿನ್ನೆಲೆಯಲ್ಲಿ ರೈತರಿಗೆ ಖುಷಿ ನೀಡಬಹುದು ಎನ್ನಲಾಗಿದೆ.
* ರೈತ ಹೋರಾಟದ ಕಾವು ತಣಿಸುವ ಘೋಷಣೆಗಳ ನಿರೀಕ್ಷೆಯಿದ್ದು ಕಿಸಾನ್ ಸಮ್ಮಾನ್ ಯೋಜನೆ ಮೊತ್ತ ಹೆಚ್ಚಳ ಮಾಡುವ ಸಾಧ್ಯತೆಯಿದೆ.

* ಬೆಂಬಲ ಬೆಲೆ ಬಗ್ಗೆ ಮಹತ್ವದ ತೀರ್ಮಾನ ಆಗಬಹುದು
* ನಗರ/ಪಟ್ಟಣ ಪ್ರದೇಶಗಳಲ್ಲಿ ನರೇಗಾದಂತಹ ಯೋಜನೆ ಜಾರಿಗೊಳಿಸಿ ಉದ್ಯೋಗ ಸೃಷ್ಟಿಗೆ ಮುಂದಾಗಬಹುದು
* ಹೆಚ್ಚು ಹೊಸ ಯೋಜನೆ ಬದಲು ಇರುವ ಯೋಜನೆಗಳಿಗೆ ಬಲ!
* ಎಲೆಕ್ಷನ್ ರಾಜ್ಯಗಳಿಗೆ `ಮೂಲಸೌಕರ್ಯ’ದ ಬಂಪರ್ ನಿರೀಕ್ಷೆ
* ರೈಲು ಮಾರ್ಗಗಳ ಖಾಸಗೀಕರಣಕ್ಕೆ ಒತ್ತು ನೀಡದೇ ಇರಬಹುದು
* ವಿದ್ಯುತ್ ಕಂಪೆನಿಗಳ ಖಾಸಗೀಕರಣ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ
* ಸ್ಟಾರ್ಟ್ ಅಪ್‍ಗಳಲ್ಲಿ ದೇಶೀಯ ಹೂಡಿಕೆಗೆ ಮತ್ತಷ್ಟು ಪ್ರೋತ್ಸಾಹಕ ಕ್ರಮ
* ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಇನ್ನಷ್ಟು ಆರ್ಥಿಕ ನೆರವು
* ಕ್ರಿಪ್ಟೋಕರೆನ್ಸಿ ನೀಡೋ ಕಂಪನಿಗಳು ಜಿಎಸ್‍ಟಿ ವ್ಯಾಪ್ತಿಗೆ..?
* ವರ್ಕ್ ಫ್ರಂ ಹೋಂ ಭತ್ಯೆಗೆ ತೆರಿಗೆ ವಿನಾಯ್ತಿ ನಿರೀಕ್ಷೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ