ಕೇಂದ್ರ ಬಜೆಟ್ ಅಧಿವೇಶನ ಡೇಟ್ ಫಿಕ್ಸ್?
ಜನವರಿ 31 ರಂದು ಸಂಸತ್ತಿನ ಎರಡು ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೊವೀಂದ್ ಭಾಷಣ ಮಾಡಲಿದ್ದಾರೆ. ಫೆಬ್ರವರಿ 2 ರಂದು ರಾಷ್ಟ್ರಪತಿಗಳ ಭಾಷಣಕ್ಕೆ ಅಭಿನಂದನೆ ಸಲ್ಲಿಸಲಿದ್ದು, ಫೆ.3 ರಿಂದ ಬಜೆಟ್ ಮೇಲಿನ ಚರ್ಚೆ ಆರಂಭವಾಗಲಿದೆ. ಮೊದಲ ಹಂತದಲ್ಲಿ 12 ದಿನಗಳ ಅಧಿವೇಶನ ನಡೆಯಲಿದ್ದು ಫೆ.11 ಕ್ಕೆ ಅಂತ್ಯವಾಗಲಿದೆ.
ಒಂದು ತಿಂಗಳ ಅವಧಿಯ ಬಿಡುವಿನ ಬಳಿಕ ಮಾರ್ಚ್ 14 ರಿಂದ ಬಜೆಟ್ ಅಧಿವೇಶನದ ಎರಡನೇ ಭಾಗ ಆರಂಭಗೊಳ್ಳಲಿದ್ದು, ಏಪ್ರಿಲ್ 8ರವರೆಗೂ ಅಧಿವೇಶನ ನಡೆಯಲಿದೆ ಎಂದು ಮೂಲಗಳು ಹೇಳಿವೆ.