ಬೆಂಗಳೂರು : ಯಾವುದೇ ಕಾರಣಕ್ಕೂ ಪಠ್ಯಪುಸ್ತಕ ಪರಿಷ್ಕರಣೆ ವಾಪಸ್ ಪಡೆಯುವುದಿಲ್ಲ.
ಈ ಬಗ್ಗೆ ಈಗಾಗಲೇ ಸರ್ಕಾರದ ನಿಲುವನ್ನು ಸ್ಪಷ್ಟವಾಗಿ ಹೇಳಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಏನೇ ಸಲಹೆಗಳು ಇದ್ದರು ಕೊಡಬಹುದು. ಅದನ್ನು ಸ್ವೀಕಾರ ಮಾಡುತ್ತೇವೆ. ಇತಿಹಾಸದಲ್ಲಿ ಮೊದಲ ಬಾರಿಗೆ ಪಬ್ಲಿಕ್ ಡೋಮೆನ್ಗೆ ಪಠ್ಯ ಹಾಕಿದ್ದೇವೆ.
ಯಾವ ದಾರ್ಶನಿಕರಿಗೂ ನಾವು ಅಪಮಾನ ಮಾಡಿಲ್ಲ. ಕುವೆಂಪು ಅವರ ಹೆಚ್ಚುವರಿ ಪಠ್ಯ ಸೇರಿಸಿರುವ ಸರ್ಕಾರ ನಮ್ಮದಾಗಿದೆ. ಆದರೆ ಕೆಲವರು ರಾಜಕೀಯ ಮಾಡಲು ಪಠ್ಯಪುಸ್ತಕವನ್ನು ಬಳಸಿಕೊಳುತ್ತಿದ್ದಾರೆ ಎಂದು ಕಿಡಿಕಾರಿದರು.