ತಿರುವನಂತಪುರಂ : ಭಾರತವು ಮೊದಲ ಮಂಕಿಪಾಕ್ಸ್ ಮರಣವನ್ನು ದಾಖಲಿಸಿದೆ. ಯುಇಎಯಿಂದ ಬಂದಿದ್ದ ಕೇರಳದ 22 ವರ್ಷದ ಯುವಕ ತ್ರಿಶೂರ್ನಲ್ಲಿ ಸಾವನ್ನಪ್ಪಿದ್ದಾನೆ.
ಮೃತ ಯುವಕ ಯುಇಎಯಿಂದ ಭಾರತಕ್ಕೆ ಹಿಂದಿರುಗಿದಾಗ ಮಾಡಿಸಿದ ಪರೀಕ್ಷೆಯಲ್ಲಿ ಮಂಕಿಪಾಕ್ಸ್ ದೃಢವಾಗಿತ್ತು. ಆದರೂ ಮುಚ್ಚಿಟ್ಟು ಎಲ್ಲರೊಂದಿಗೆ ಬೆರೆತಿದ್ದ. ಸ್ನೇಹಿತರೊಂದಿಗೆ ಫುಟ್ಬಾಲ್ ಸಹ ಆಡಿದ್ದ. ಜುಲೈ 26 ರಂದು ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ತ್ರಿಶೂರ್ನ ಪುನ್ನಿಯೂರ್ನ ಈ ಯುವಕ ಯುಎಇಯಿಂದ ಮರಳಿದ ಕೆಲವೇ ದಿನಗಳಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ನಂತರ, ಆರೋಗ್ಯ ಇಲಾಖೆ ಅವನ ಮಾದರಿಗಳನ್ನು ಅಲಪ್ಪುಳದ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಕೇರಳ ಘಟಕಕ್ಕೆ ಕಳುಹಿಸಿದೆ.
ವಿದೇಶದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಯುವಕನಿಗೆ ಮಂಕಿಪಾಕ್ಸ್ ಇರುವುದು ದೃಢಪಟ್ಟಿತ್ತು. ಆದರೆ ಅವನ ಕುಟುಂಬದ ಸದಸ್ಯರು ಶನಿವಾರವಷ್ಟೇ ಪರೀಕ್ಷಾ ಫಲಿತಾಂಶವನ್ನು ಆಸ್ಪತ್ರೆ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದರು.
ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಈ ಕುರಿತು ಮಾತನಾಡಿದ್ದು, ಮಂಕಿಪಾಕ್ಸ್ ಲಕ್ಷಣಗಳಿರುವ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲಾಗುವುದು.