ಕಾಮನ್ ವೆಲ್ತ್ ಗೇಮ್ಸ್: ಭಾರತಕ್ಕೆ ಎರಡನೇ ಚಿನ್ನ ಗೆದ್ದುಕೊಟ್ಟ ಜೆರೆಮಿ
19 ವರ್ಷದ ಜೆರೆಮಿ ಲಾಲ್ರಿನ್ನುಂಗಾ ಒಟ್ಟು 300 ಕೆ.ಜಿ. ಭಾರ ಎತ್ತುವ ಮೂಲಕ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು.
ವಿಶೇಷವೆಂದರೆ ಜೆರೆಮಿ ಎರಡನೇ ಬಾರಿ ಭಾರ ಎತ್ತುವಾಗ ಅವರಿಗೆ ನೋವು ಕಾಣಿಸಿಕೊಂಡಿದೆ. ಗಾಯದ ಭೀತಿಯ ಹೊರತಾಗಿಯೂ ಜೆರೆಮಿ ದಾಖಲೆ ಮಾಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.