ಜಗದ ಸೃಷ್ಟಿಗೆ ಹೆಣ್ಣಿನ ಪಾತ್ರ ಅಗಾಧ

ಮಂಗಳವಾರ, 8 ಮಾರ್ಚ್ 2022 (12:35 IST)
ಸ್ತ್ರೀ ಎಂಬುದು ಸೃಷ್ಟಿ. ತಾಯಿ, ಸ್ನೇಹಿತೆ, ಪತ್ನಿ, ಸಹೋದ್ಯೋಗಿ, ಮಗಳು ಹೀಗೆ ಹಲವು ಪಾತ್ರವನ್ನು ನಿರ್ವಹಿಸುವ ಮಹಾಶಕ್ತಿ. ಮಹಿಳೆ ಇಲ್ಲದ ಜಗತ್ತನ್ನೇ ಊಹಿಸಲು ಸಾಧ್ಯವಿಲ್ಲ.
 
ಇಂದು ಮಾರ್ಚ್ 8, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನ . ಹೆಣ್ಣು  ಎಂದರೆ ಸಮಾಜದ ಕಣ್ಣು. ಹೆಣ್ಣು ಎಂದರೆ ಮಮತಾಮಯಿ, ತ್ಯಾಗಮಯಿ, ಸಹನಾಮೂರ್ತಿ, ದಯಾಮಯಿ ಎಲ್ಲವೂ ಹೌದು. ಆಕೆ ಎಲ್ಲರನ್ನೂ ಪ್ರೀತಿಯಿಂದ ಪೊರೆಯುತ್ತಾಳೆ. ನನಗೆ ಬೇಕೆಂಬ ಸ್ವಾರ್ಥವಿಲ್ಲದೆ ಎಲ್ಲವನ್ನೂ ಮತ್ತೊಬ್ಬರಿಗಾಗಿ ನೀಡುತ್ತಾಳೆ.

ಸೃಷ್ಟಿಯೇ ಹೆಣ್ಣು. ಅದಲ್ಲದೆ ಹೆಣ್ಣಿಗೆ ಹಲವು ರೂಪಗಳು. ತಾಯಿ, ಸ್ನೇಹಿತೆ, ಪತ್ನಿ, ಸಹೋದ್ಯೋಗಿ, ಮಗಳು ಆಕೆ ಎಲ್ಲವೂ ಹೌದು. ಎಲ್ಲರ ಜೀವನದಲ್ಲೂ ಹೆಣ್ಣಿಗೆ ಮಹತ್ತರ ಪಾತ್ರವಿದೆ. ಅದಕ್ಕಾಗಿ ಆಕೆಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ಪ್ರತೀ ವರ್ಷ ಮಾರ್ಚ್ 8ರಂದು  ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಯನ್ನು ಆಚರಿಸಲಾಗುತ್ತದೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯದ ಮೇಲೆ ಬೆಳಕು ಚೆಲ್ಲಲಾಗುತ್ತದೆ. ಬಡ, ದುರ್ಬಲ ಹೆಣ್ಣು ಮಕ್ಕಳನ್ನು ಪ್ರೋತ್ಸಾಹಿಸಿ ಸುಂದರ ಬದುಕನ್ನು ರೂಪಿಸಲು ನೆರವು ನೀಡಲಾಗುತ್ತದೆ.

ಸರಿ ಸುಮಾರು 45 ವರ್ಷಗಳಿಂದ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. 2022 ಮಹಿಳಾ ದಿನಾಚರಣೆಯ ಥೀಮ್ ‘’ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ’ ಎಂಬ ಧ್ಯೇಯವಾಕ್ಯವಾಗಿದೆ.

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಪ್ರಕಾರ, ಅಂತರಾಷ್ಟ್ರೀಯ ಮಹಿಳಾ ದಿನವು ಮೊದಲು ಉತ್ತರ ಅಮೆರಿಕಾ ಮತ್ತು ಯುರೋಪ್ನಾದ್ಯಂತ ಇಪ್ಪತ್ತನೇ ಶತಮಾನದ ತಿರುವಿನಲ್ಲಿ ಕಾರ್ಮಿಕ ಚಳುವಳಿಗಳ ಚಟುವಟಿಕೆಗಳಿಂದ ಹೊರಹೊಮ್ಮಿತು. ಯುನೆಸ್ಕೋದ ಪ್ರಕಾರ, ಮೊದಲ ರಾಷ್ಟ್ರೀಯ ಮಹಿಳಾ ದಿನವನ್ನು ಯುನೈಟೆಡ್ ಸ್ಟೇಟ್ಸ್ನಲ್ಲಿ ಫೆಬ್ರವರಿ 28 1909ರಂದು ಆಚರಿಸಲಾಯಿತು, ಇದನ್ನು ಸಮಾಜವಾದಿ ಪಕ್ಷ ಆಫ್ ಅಮೇರಿಕಾ ನ್ಯೂಯಾರ್ಕ್ನಲ್ಲಿ 1908 ರಲ್ಲಿ ಗಾರ್ಮೆಂಟ್ ಕಾರ್ಮಿಕರ ಮುಷ್ಕರದ ಗೌರವಾರ್ಥವಾಗಿ ಸಮರ್ಪಿಸಿತು.

ಅಲ್ಲಿ ಮಹಿಳೆಯರು ಕಠಿಣ ಕೆಲಸದ ಪರಿಸ್ಥಿತಿಗಳ ವಿರುದ್ಧ ಪ್ರತಿಭಟಿಸಿದರು. 1917ರಲ್ಲಿ, ರಷ್ಯಾದಲ್ಲಿ ಮಹಿಳೆಯರು ಫೆಬ್ರವರಿಯ ಕೊನೆಯ ಭಾನುವಾರದಂದು "ಬ್ರೆಡ್ ಮತ್ತು ಪೀಸ್" ಘೋಷಣೆಯಡಿಯಲ್ಲಿ ಪ್ರತಿಭಟನೆ ಮತ್ತು ಮುಷ್ಕರವನ್ನು ಆಯ್ಕೆ ಮಾಡಿದರು. ಅವರ ಚಳುವಳಿ ಅಂತಿಮವಾಗಿ ರಷ್ಯಾದಲ್ಲಿ ಮಹಿಳೆಯರ ಮತದಾನದ ಹಕ್ಕು ಜಾರಿಗೆ ಕಾರಣವಾಯಿತು.

ಇದರ ಹಿನ್ನಲೆಯಲ್ಲಿ ಮಹಿಳೆಯರು ಕೆಲವು ದಿನಗಳ ನಂತರ ಮಾರ್ಚ್ 8ರಂದು ಶಾಂತಿ ಕಾರ್ಯಕರ್ತರನ್ನು ಬೆಂಬಲಿಸಲು ಮೆರವಣಿಗೆಗಳನ್ನು ನಡೆಸಿದರು. ಇದೇ ಕಾರಣಕ್ಕಾಗಿ ಮಾರ್ಚ್ 8ನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಅಧಿಕೃತವಾಗಿ ಘೋಷಣೆ ಮಾಡಲಾಯಿತು.

1975ರಲ್ಲಿ ವಿಶ್ವಸಂಸ್ಥೆಯು ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲು ಅಧಿಕೃತವಾಗಿ ಘೋಷಣೆ ಮಾಡಿತು. ಇದರಿಂದ ಯುರೋಪ್ನಲ್ಲಿ ಮಹಿಳಾ ದಿನಾಚರಣೆ ಒಂದು ಮಹತ್ವದ ದಿನವಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ