ಸುಪ್ರೀಂ ಕೋರ್ಟ್ ನ ಮಹತ್ವದ ತೀರ್ಪು ಮಹಿಳೆಯ ಸಾವಿಗೆ ಕಾರಣವಾಯ್ತಾ?

ಬುಧವಾರ, 3 ಅಕ್ಟೋಬರ್ 2018 (08:25 IST)
ಚೆನ್ನೈ : ವಿವಾಹೇತರ ಸಂಬಂಧ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್  ಮಹತ್ವದ ತೀರ್ಪು ಪ್ರಕಟಿಸಿದ ಬೆನ್ನಲೇ ಇದೀಗ ಮಹಿಳೆಯೊಬ್ಬಳು ಪತಿ ಬೇರೆಯೊಬ್ಬಳ ಜೊತೆ ಸಂಬಂಧ ಹೊಂದಿರುವುದನ್ನು ಕಂಡು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.


ಚೆನ್ನೈನ ಪುಷ್ಪಲತಾ(24) ಆತ್ಮಹತ್ಯೆಗೆ  ಶರಣಾದ ಮಹಿಳೆ. ಈಕೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು ಆದಕಾರಣ ಈಕೆಯ ಪತಿ ಬೇರೆ ಮಹಿಳೆಯೊಬ್ಬಳ ಜೊತೆ ಸಂಬಂಧ ಹೊಂದಿದ್ದ.


ಈ ನಡುವೆ  ಸುಪ್ರೀಂ ಕೋರ್ಟ್ ನ ನ್ಯಾ.ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ವಿವಾಹೇತರ ಸಂಬಂಧ ಅಪರಾಧವಲ್ಲ ಎಂದು ಮಹತ್ವದ ತೀರ್ಪು ಪ್ರಕಟಿಸಿತ್ತು. ಇದರಿಂದ ಪುಷ್ಪಲತಾಳ ಪತಿ ಕೋರ್ಟ್​ ತೀರ್ಪಿಗೆ ಖುಷಿ ವ್ಯಕ್ತಪಡಿಸಿ, ಇನ್ನು ಮುಂದೆ ಅನೈತಿಕ ಸಂಬಂಧವನ್ನು ಪ್ರಶ್ನಿಸಲು ನಿನ್ನಿಂದ ಸಾಧ್ಯವಿಲ್ಲ ಎಂದು ಆಕೆಯ  ಮುಂದೆ ಹೇಳಿಕೊಂಡಿದ್ದಾನೆ.


ಇದರಿಂದ ಮನನೊಂದ  ಪುಷ್ಪಲತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ನಡೆದ ಹಿನ್ನಲೆಯಲ್ಲಿ ಪುಷ್ಪಲತಾಳ ಪತಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ವರದಿಯಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ