ಯಾವ ಪಕ್ಷದೊಂದಿಗೂ ಮೈತ್ರಿಯಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ

ಮಂಗಳವಾರ, 27 ಮಾರ್ಚ್ 2018 (17:53 IST)
ರಾಜ್ಯದ ಜನತೆ ಈಗಾಗಲೇ ತೀರ್ಮಾನ‌ ಮಾಡಿದ್ದಾರೆ ಕಾಂಗ್ರೆಸ್ ಅನ್ನು ಮುಗಿಸೋಕೆ. ಬಿಜೆಪಿ ಯನ್ನು ಅಧಿಕಾರಕ್ಕೆ ಬರದಂತೆ ಮಾಡಲು ನಮಗೂ ಗೊತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಕಂಡರೆ ಸಿದ್ದರಾಮಯ್ಯರಿಗೆ ಭಯ ಶುರುವಾಗಿದೆ.ಅದಕ್ಕಾಗಿ ಜೆಡಿಎಸ್‌ ಬಗ್ಗೆ ಈ ರೀತಿ ಮಾತನಾಡುತ್ತಿದ್ದಾರೆ. ಸಿ ಫೋರ್ ಸಮೀಕ್ಷೆ ಮಾಡಿವದರು ಸಿಎಂ ಕಾಂಪೌಂಡ್ ನಲ್ಲೆ ಇರುವವರು.ಸಿಎಂ ಜೆಡಿಎಸ್ ಪಕ್ಷ  28 ಸ್ಥಾನ ಬರುತ್ತೇ ಅಂತಾರೆ. ನಾನು ಹೇಳ್ತೇನೆ ಕೇಳಿ ಕಾಂಗ್ರೆಸ್ 28 ಬರುತ್ತದೆ ಜೆಡಿಎಸ್ 128 ಬರುತ್ತೇ ಎಂದು ಸಿಎಂ ‌ವಿರುದ್ಧ ಕಿಡಿಕಾರಿದರು.
 
ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆ.
 
ಮಾಹಿತಿ ತಿಳಿದು ನೆನ್ನೆ ರಾತ್ರಿಯೇ ಸಿಎಂ ಪ್ರಮುಖ ಕಡತಗಳಿಗೆ ಸಹಿ ಹಾಕಿದ್ದಾರೆ.ನೀವು ಸಹಿ ಹಾಕಿದ ಕೆಲವೆ ಕ್ಷಣದಲ್ಲಿ ನಮಗೆ ಮಾಹಿತಿ ಬರುತ್ತದೆ.
 
ಚುನಾವಣೆ ಘೋಷಣೆ ಸಂದರ್ಭದಲ್ಲಿ ಸಿಎಂ ಮಾತು ಕೇಳಿದ್ರೆ  ಅಧಿಕಾರಿಗಳೆ ನೀವು ಜೈಲಿಗೆ ಹೋಗಬೇಕಾಗುತ್ತದೆ. ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಎಚ್‌ಡಿಕೆ, ರಾತ್ರೋರಾತ್ರಿ ಕಡತಗಳಿಗೆ ಸಿಎಂ ಯಾಕೆ ಸಹಿ ಹಾಕುತ್ತಿದ್ದಾರೆ.ಇದು ಭ್ರಷ್ಟಾಚಾರದ ಮುಖವಾಡವನ್ನು ಬಯಲು ಮಾಡಿದೆ ಎಂದು ಆರೋಪಿಸಿದರು
 
ಮೆ.12 ರಂದು ಚುನಾವಣೆ.
 
ನಂಜನಗೂಡು ನಂಜುಡೇಶ್ವರ ಆಶೀರ್ವಾದ ನನ್ನ ಮೇಲೆ ಇದೆ. ಕಾಂಗ್ರೆಸ್, ಬಿಜೆಪಿಗಿಂತ ಹತ್ತು ಹೆಜ್ಜೆ ಮುಂದೆ ಇದ್ದೇನೆ. ಬಾಕಿ ಉಳಿದಿರುವ ಅಭ್ಯರ್ಥಿಗಳ ಪಟ್ಟಿಯನ್ನು ಒಂದು ವಾರದಲ್ಲಿ ಬಿಡುಗಡೆ ಮಾಡುತ್ತೇನೆ. ಚುನಾವಣೆಯಲ್ಲಿ ಜನರ ನಾಡಿ‌ಮೀಡಿತ ಅರಿತ್ತಿದ್ದೇನೆ.ಈ ಬಾರಿ ಜೆಡಿಎಸ್ ಅಧಿಕಾರಕ್ಕೆ  ಬರುವುದು ನೂರಕ್ಕೆ ನೂರರಷ್ಟು ಸತ್ಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ