ಒಮಿಕ್ರಾನ್ ಸೋಂಕಿನಿಂದ ಉಂಟಾಗಿರುವ ಕೊವಿಡ್ 19 ಮೂರನೇ ಅಲೆ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯುಜನರು ಅಂದರೆ ಕಿರಿಯವಯಸ್ಸಿನವರಿಗೇ ಬಾಧಿಸುತ್ತಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು , ಆಸ್ಪತ್ರೆಗಳ ಅಂಕಿ-ಅಂಶಗಳನ್ನು ಆಧರಿಸಿ ನಡೆಸಿದ್ದ ಸಮೀಕ್ಷೆಯಲ್ಲಿ ಬಹಿರಂಗಗೊಂಡಿದೆ.
ದೇಶಾದ್ಯಂತ ಸುಮಾರು 37 ಆಸ್ಪತ್ರೆಗಳಿಂದ ಸಂಗ್ರಹಿಸಿದ್ದ ಅಂಕಿ-ಅಂಶಗಳನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿತ್ತು ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ್ ತಿಳಿಸಿದ್ದಾರೆ.
ಆಸ್ಪತ್ರೆಗಳಲ್ಲಿ ಲಭ್ಯವಾದ 2021 ಡಿಸೆಂಬರ್ 16 ಮತ್ತು 2022 ಜನವರಿ 17 ರ ನಡುವಿನ ಡೇಟಾವನ್ನು 2021ರ ನವೆಂಬರ್ 15 ಮತ್ತು ಡಿಸೆಂಬರ್ 15ರ ಡೇಟಾಕ್ಕೆ ಹೋಲಿಸಿ ಸಮೀಕ್ಷೆ ನಡೆಸಿದಾಗ, ಈ ಬಾರಿ ಮೂರನೇ ಅಲೆಯಲ್ಲಿ ಆಸ್ಪತ್ರೆಗೆ ಮೂರನೇ ತರಂಗದಲ್ಲಿ ಆಸ್ಪತ್ರೆಗೆ ದಾಖಲಾಗುವವರ ಸರಾಸರಿ ವಯಸ್ಸು ಅಂದಾಜು 44 ಆಗಿತ್ತು. ಅದು ಹಿಂದಿನ ಅಲೆಯಲ್ಲಿ ಅಂದಾಜು 55 ಆಗಿತ್ತು ಎಂದು ಹೇಳಲಾಗಿದೆ.