ಲಂಡನ್ : ಇಂದು ಬ್ರಿಟನ್ನ ರಾಣಿ 2ನೇ ಎಲಿಜಬೆತ್ ಅಂತ್ಯಕ್ರಿಯೆ ನೆರವೇರಲಿದ್ದು ಲಂಡನ್ನಲ್ಲಿ ಭಾರೀ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿ 500ಕ್ಕೂ ಹೆಚ್ಚು ವಿಶ್ವದ ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗಿ ಆಗಲಿದ್ದಾರೆ. ಅಂತ್ಯಕ್ರಿಯೆಗೆ 10 ಲಕ್ಷ ಜನರು ಸೇರುವ ಹಿನ್ನೆಲೆ ಬ್ರಿಟನ್ನಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ.
ವಿಶ್ವದ ನಾಯಕರು ಬಸ್ನಲ್ಲಿ ಅಂತ್ಯಕ್ರಿಯೆಗೆ ಆಗಮಿಸಿದರೆ, ಅಮೆರಿಕ ಅಧ್ಯಕ್ಷ ಬೈಡನ್ಗೆ ತಮ್ಮ ವಿಶೇಷ ಭದ್ರತಾ ವಾಹನ ಬೀಸ್ಟ್ನಲ್ಲಿ ಬರಲು ಅವಕಾಶ ಕೊಡಲಾಗಿದೆ.
ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೆರವಣಿಗೆ ಆರಂಭವಾಗಲಿದ್ದು, ಮಧ್ಯರಾತ್ರಿ 12 ಗಂಟೆಗೆ ಅಂತ್ಯಕ್ರಿಯೆ ನೆರವೇರಲಿದೆ. ಇದನ್ನು ಎಲ್ಇಡಿ ಸ್ಕ್ರೀನ್, ಥಿಯೇಟರ್ಗಳಲ್ಲಿ ನೇರಪ್ರಸಾರ ಮಾಡಲು ಸಿದ್ಧತೆ ನಡೆಸಲಾಗಿದೆ.