ಇಂದು ಮುರುಘಾ ಶ್ರೀಗಳ ಭವಿಷ್ಯ ನಿರ್ಧಾರ

ಸೋಮವಾರ, 5 ಸೆಪ್ಟಂಬರ್ 2022 (07:31 IST)
ಚಿತ್ರದುರ್ಗ : ಮುರುಘಾ ಶ್ರೀಗಳ ಪೊಲೀಸ್ ಕಸ್ಟಡಿ ಭಾನುವಾರಕ್ಕೆ ಅಂತ್ಯವಾಗಿದ್ದು ಜಾಮೀನು ಸಿಗುತ್ತಾ? ಅಥವಾ ನ್ಯಾಯಾಂಗ ಬಂಧನಕ್ಕೆ ಒಳಗಾಗುತ್ತಾರಾ ಎನ್ನುವುದು ಇಂದು ನಿರ್ಧಾರವಾಗಲಿದೆ.
 
ಲೈಂಗಿಕ ದೌರ್ಜನ್ಯ ಅಲ್ಲದೇ ಶ್ರೀಗಳ ಮೇಲೆ ಪೋಕ್ಸೋ ಕೇಸ್ ದಾಖಲಾಗಿದೆ. ಹೀಗಾಗಿ ಚಾರ್ಜ್ಶೀಟ್ ಸಲ್ಲಿಕೆಯಾಗುವವರೆಗೂ ಜಾಮೀನು ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಕಳೆದ 3 ದಿನಗಳಿಂದ ಪೊಲೀಸ್ ಕಸ್ಟಡಿಯಲ್ಲಿದ್ದ ಶ್ರೀಗಳನ್ನು ಇಂದು ಬೆಳಗ್ಗೆ 11 ಗಂಟೆಗೆ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಲಾಗುತ್ತದೆ. ಕಸ್ಟಡಿಗೆ ಪಡೆದ ಮೂರು ದಿನದಲ್ಲಿ ಸ್ಥಳ ಮಹಜರು ಸೇರಿದಂತೆ ಹಲವು ಪ್ರಕ್ರಿಯೆಗಳನ್ನು ಪೊಲೀಸರು ಮಾಡಿದ್ದಾರೆ.  

ಇಂದು ಶ್ರೀಗಳ ಪರ ವಕೀಲರು ಜಾಮೀನು ನೀಡುವಂತೆ ನ್ಯಾಯಾಧೀಶರ ಮುಂದೆ ಮನವಿ ಮಾಡಲಿದ್ದಾರೆ. ಅಲ್ಲದೇ ಆರೋಗ್ಯದ ಪರಿಸ್ಥಿತಿ ಸರಿಯಿಲ್ಲದ ಕಾರಣ ಬೆಂಗಳೂರಿನ ಜಯದೇವ ಇಲ್ಲ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಲು ಅನುಮತಿಯನ್ನು ಕೂಡ ಕೇಳಲಿದ್ದಾರೆ.

ನ್ಯಾಯಾಲಯದಲ್ಲಿ ಶ್ರೀಗಳ ಜಾಮೀನು ಅರ್ಜಿ ಹಾಗೂ ಚಿಕಿತ್ಸೆಗೆ ಬೇರೆ ಕಡೆ ಹೋಗಲು ಅನುಮತಿಯನ್ನು ಪಡೆಯಲು ಮತ್ತೆ ಮನವಿ ಸಲ್ಲಿಸಲಾಗುತ್ತದೆ. ಇದಕ್ಕೆ ನ್ಯಾಯಾಧೀಶರು ಒಪ್ಪುತ್ತಾರಾ ಇಲ್ವಾ ಎಂಬುದು ಕುತೂಹಲವಾಗಿದೆ. ಜಾಮೀನು ಅರ್ಜಿ, ಚಿಕಿತ್ಸೆಗೆ ಮನವಿ ಅರ್ಜಿಯನ್ನು ನ್ಯಾಯಾಧೀಶರು ತಿರಸ್ಕರಿಸಿದರೆ ಮುರುಘಾ ಶರಣರಿಗೆ ಜೈಲುವಾಸ ಪಕ್ಕಾ ಆಗಲಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ