ವಾಹನ ಸವಾರರಿಗೆ ಮತ್ತೆ ಟೋಲ್ ಸುಂಕ ಹೆಚ್ಚಳ!

ಶನಿವಾರ, 2 ಜುಲೈ 2022 (12:45 IST)
ಬೆಂಗಳೂರು : ಫ್ಲೈಓವರ್ ಸೇರಿದಂತೆ ಶೇ.25% ರಷ್ಟು ಟೋಲ್ ಸುಂಕವನ್ನು ಎನ್ಎಚ್ಐಎ ಹೆಚ್ಚಳ ಮಾಡಿದೆ.

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮತ್ತು ಅತ್ತಿಬೆಲೆ ಟೋಲ್ ಶುಲ್ಕ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಇದುವರೆಗೆ 20 ರೂಪಾಯಿ ಟೋಲ್ ನೀಡಿ ಫ್ಲೈಓರ್ ಬಳಸುತ್ತಿದ್ದ ದ್ವಿಚಕ್ರ ವಾಹನ ಸವಾರರಿಗೆ 5 ರೂಪಾಯಿ ಹೆಚ್ಚಿಸಲಾಗಿದೆ. 

ಜುಲೈ 1 ರಿಂದ ಫ್ಲೈಓವರ್ ಬಳಸಿದರೆ ದ್ವಿಚಕ್ರ ವಾಹನ ಸವಾರರಿಗೆ 25 ಸಿಂಗಲ್ ಟಿಕೆಟ್ ನೀಡಲಾಗುತ್ತಿದೆ. 35 ರೂಪಾಯಿ ನೀಡಿದರೆ 12 ಗಂಟೆಯ ವರೆಗೆ ಫ್ಲೈಓವರ್ ಬಳಸಬಹುದು. ವಾಣಿಜ್ಯ ಸಂಬಂಧಿತ ವಾಹನಗಳಿಗೂ ಭಾರೀ ಟ್ಯಾಕ್ಸ್ ವಿಧಿಸಲಾಗಿದೆ.

ಕಾರು 60, ವಾಣಿಜ್ಯ ವಾಹನ 85, ಟ್ರಕ್, ಬಸ್ 170, ಭಾರೀ ವಾಹನ 335 (ಸಿಂಗಲ್ ಪಾಸ್). ಒಂದು ದಿನದ ಪಾಸ್ _ದ್ವಿಚಕ್ರವಾಹನ 35, ಕಾರು 90, ವಾಣಿಜ್ಯ ವಾಹನ, 125, ಟ್ರಕ್ ,ಬಸ್ 250, ಭಾರೀ ವಾಹನ 505 ರೂ. ಆಗಿರುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ