12 ದಿನ ಬ್ಯಾಂಕುಗಳಿಗೆ ರಜೆ!

ಭಾನುವಾರ, 30 ಜನವರಿ 2022 (14:43 IST)
ನವದೆಹಲಿ : ದೇಶದ ಹಲವು ರಾಜ್ಯಗಳು ಮತ್ತು ಪ್ರದೇಶಗಳಲ್ಲಿ ಅನೇಕ ಹಬ್ಬದ ಸಂದರ್ಭಗಳು ಮತ್ತು ವಾರಾಂತ್ಯದ ರಜೆಗಳ ಕಾರಣ ಫೆಬ್ರವರಿ 2022 ರಲ್ಲಿ ಬ್ಯಾಂಕುಗಳು ಒಟ್ಟು 12 ದಿನಗಳವರೆಗೆ ಮುಚ್ಚಲ್ಪಡುತ್ತಿವೆ.
 
(ಆರ್ಬಿಐ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಫೆಬ್ರವರಿಯ ರಜಾದಿನಗಳ ಪಟ್ಟಿಯು ದೇಶದ ವಿವಿಧ ರಾಜ್ಯಗಳಲ್ಲಿ ಆಯ್ದ ದಿನಗಳಂದು ಬ್ಯಾಂಕುಗಳು ಮುಚ್ಚಲ್ಪಡುತ್ತಿವೆ ಎಂದು ಸೂಚಿಸಿದೆ. 

ಯಥಾ ಪ್ರಕಾರ ದೇಶಾದ್ಯಂತ ಬ್ಯಾಂಕುಗಳು ಶನಿವಾರ ಮತ್ತು ಭಾನುವಾರದ ರಜಾದಿನಗಳಲ್ಲಿ ಮುಚ್ಚಲ್ಪಡುತ್ತವೆ. ಇದಲ್ಲದೆ, ಬಸಂತ್ ಪಂಚಮಿ ಮತ್ತು ಗುರು ರವಿದಾಸ್ ಜಯಂತಿಯಂತಹ ಸಂದರ್ಭಗಳಲ್ಲಿ, ದೇಶದ ಅನೇಕ ಭಾಗಗಳಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.

ಯಾವ ದಿನ ಏನು?

ಫೆಬ್ರವರಿ 2 – ಸೋನಮ್ ಲೋಚಾರ್ (ಗ್ಯಾಂಗ್ಟಾಕ್)
ಫೆಬ್ರವರಿ 5 – ಸರಸ್ವತಿ ಪೂಜೆ/ ಶ್ರೀ ಪಂಚಮಿ/ಶ್ರೀ ಪಂಚಮಿ ಬಸಂತ್ ಪಂಚಮಿ (ಅಗರ್ತಲಾ, ಭುವನೇಶ್ವರ್, ಕೋಲ್ಕತ್ತಾ)
ಫೆಬ್ರವರಿ 6 – ಮೊದಲ ಭಾನುವಾರ
ಫೆಬ್ರವರಿ 12 – ಎರಡನೇ ಶನಿವಾರ
ಫೆಬ್ರವರಿ 13 – ಎರಡನೇ ಭಾನುವಾರ
ಫೆಬ್ರವರಿ 15 – ಮೊಹಮ್ಮದ್ ಹಜರತ್ ಅಲಿ ಜನ್ಮದಿನ/ಲೂಯಿಸ್-ನಾಗೈ-ನಿ (ಇಂಫಾಲ್, ಕಾನ್ಪುರ್, ಲಕ್ನೋ)
ಫೆಬ್ರವರಿ 16 – ಗುರು ರವಿದಾಸ್ ಜಯಂತಿ (ಚಂಡೀಗಢ)
ಫೆಬ್ರವರಿ 18 – ಡೋಲ್ಜಾತ್ರಾ (ಕೋಲ್ಕತ್ತಾ)
ಫೆಬ್ರವರಿ 19 – ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿ (ಬೇಲಾಪುರ, ಮುಂಬೈ, ನಾಗ್ಪುರ)
ಫೆಬ್ರವರಿ 20 – ಮೂರನೇ ಭಾನುವಾರ
ಫೆಬ್ರವರಿ 26 – ತಿಂಗಳ ನಾಲ್ಕನೇ ಶನಿವಾರ
ಫೆಬ್ರವರಿ 27 – ನಾಲ್ಕನೇ ಭಾನುವಾರ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ