ರಾಷ್ಟ್ರಪಿತ ಗಾಂಧೀಜಿ ಹುಟ್ಟಿದ ದಿನಕ್ಕೆ ಶಾಲೆಗಳಿಗೆ ರಜೆ ಅಗತ್ಯವಿದೆಯೇ?
ಮಂಗಳವಾರ, 2 ಅಕ್ಟೋಬರ್ 2018 (06:43 IST)
ಬೆಂಗಳೂರು: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಹುಟ್ಟಿದ ದಿನ ದೇಶದ ಎಲ್ಲಾ ಶಾಲೆ, ಕಚೇರಿಗಳಿಗೆ ರಜೆ ಕೊಟ್ಟುಬಿಡಲಾಗುತ್ತದೆ. ಇದರಿಂದ ರಾಷ್ಟ್ರಪಿತನ ಜನ್ಮದಿನಕ್ಕೆ ಅರ್ಥ ಸಿಗುವುದೇ?
ನಿಜವಾಗಿಯೂ ಗಾಂಧೀಜಿ ಜನ್ಮ ದಿನಕ್ಕೆ ಅರ್ಥ ಸಿಗಬೇಕೆಂದರೆ ಆ ದಿನ ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಗಾಂಧೀಜಿ ಕನಸಿನ ಬಗ್ಗೆ ತಿಳುವಳಿಕೆ ನೀಡುವುದು, ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಡಲು ಸ್ವಯಂ ಸೇವೆ ಮಾಡಿಸುವುದು ಇತ್ಯಾದಿ ಚಟುವಟಿಕೆಗಳನ್ನು ಮಾಡಿಸಿದರೆ ಅಂದಿನ ದಿನಕ್ಕೆ ಅರ್ಥ ಸಿಗುತ್ತದೆ.
ಆದರೆ ನಮ್ಮಲ್ಲಿ ಹೆಚ್ಚಿನ ಶಾಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ನಗರದ ಶಾಲೆಗಳಲ್ಲಿ ಇದು ನಡೆಯುತ್ತಿಲ್ಲ ಎನ್ನುವುದು ವಿಪರ್ಯಾಸ. ಇದರಿಂದಾಗಿ ಮಕ್ಕಳಲ್ಲಿ ನಮ್ಮ ದೇಶಕ್ಕಾಗಿ ಹೋರಾಡಿದ ಮಹನೀಯರ ಪರಿಚಯ, ಅವರ ಕನಸು ತಿಳಿಯದೇ ಹೋಗುತ್ತಿದೆ.
ಕೇವಲ ಸ್ವಚ್ಛ ಭಾರತ ಎಂಬ ಘೋಷಣೆಯೊಂದೇ ನಮ್ಮ ದೇಶವನ್ನು ಸ್ವಚ್ಛಗೊಳಿಸಲು ಸಾಕಾಗುತ್ತಿಲ್ಲ. ಸ್ವಚ್ಛತೆ ಕೈಗೊಳ್ಳದೇ ಇದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಕಟ್ಟುನಿಟ್ಟಿನ ಕಾನೂನುಗಳು ಜಾರಿಯಾಗಬೇಕು. ಎಳವೆಯಲ್ಲೇ ಇದರ ಬಗ್ಗೆ ಅರಿವು ಮೂಡಬೇಕು. ಆಗ ಮಾತ್ರ ಗಾಂಧೀಜಿ ಕನಸು ನನಸಾಗಲು ಸಾಧ್ಯ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.