ಕೈದಿಗಳನ್ನು ಬಿಡುಗಡೆ ಮಾಡುತ್ತೇವೆ : ಝೆಲೆನ್ಸ್ಕಿ
ಉಲ್ಬಣಗೊಳ್ಳುತ್ತಿರುವ ಯುದ್ಧದ ಪರಿಸ್ಥಿತಿಯ ಮಧ್ಯೆ, ಅವರು ಸೋಮವಾರ (ಫೆಬ್ರವರಿ 28) ರಷ್ಯಾದೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳಲು ಸಿದ್ಧರಿದ್ದರೆ ಹಿಂದಿನ ಮಿಲಿಟರಿ ಅನುಭವ ಹೊಂದಿರುವ ಕೈದಿಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದ್ದೇವೆ ಎಂದು ಹೇಳಿದರು.
ರಷ್ಯಾದ ಪಡೆಗಳ ಆಕ್ರಮಣದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಉಕ್ರೇನ್ ವಿಶೇಷ ಕಾರ್ಯವಿಧಾನದ ಅಡಿಯಲ್ಲಿ ಸದಸ್ಯತ್ವವನ್ನು ಪಡೆಯಲು ತಕ್ಷಣವೇ ಅವಕಾಶ ನೀಡುವಂತೆ ಝೆಲೆನ್ಸ್ಕಿ ಯುರೋಪಿಯನ್ ಒಕ್ಕೂಟವನ್ನು ಕೇಳಿಕೊಂಡಿದ್ದಾರೆ.