ರಷ್ಯಾದ ಧ್ವಜ ಹಾರಿಸಿದ ಮಿಲಿಟರಿ ಪಡೆ
ಉಕ್ರೇನ್ನ ಕಾಖೋವ್ಕಾದಲ್ಲಿರುವ ಡ್ನೀಪರ್ ನದಿಗೆ ಅಡ್ಡಲಾಗಿ ಡ್ಯಾಮ್ ಕಟ್ಟಿ ಜಲ ವಿದ್ಯತ್ ಸ್ಥಾವರವನ್ನು ಸ್ಥಾಪಿಸಿತ್ತು. ಈ ವಿದ್ಯುತ್ ಸ್ಥಾವರದಿಂದ ಉಕ್ರೇನ್ನ ಸಾಕಷ್ಟು ಭಾಗಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತಿತ್ತು.
ಇದೀಗ ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ರಷ್ಯಾದ ಮಿಲಿಟರಿ ಪಡೆ ಪವರ್ ಪ್ಲಾಂಟ್ ವಶಪಡಿಸಿಕೊಂಡು ರಷ್ಯಾದ ರಾಷ್ಟ್ರ ಧ್ವಜವನ್ನು ಹಾರಿಸಿದೆ.
ಈಗಾಗಲೇ ರಷ್ಯಾ, ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ್ದು, ಬಾಂಬ್ ಮತ್ತು ಇತರ ಯುದ್ಧೋಪಕರಣಗಳೊಂದಿಗೆ ರಷ್ಯಾದ ಮಿಲಿಟರಿ ಪಡೆ ಕಾಖೋವ್ಕಾದ ನಗರ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ ಎಂದು ವರದಿಯಾಗಿದೆ.