ವೀಕೆಂಡ್ ಕರ್ಫ್ಯೂ : ಕ್ಯಾರೆ ಎನ್ನದ ಜನರು!

ಶನಿವಾರ, 8 ಜನವರಿ 2022 (09:08 IST)
ರಾಜ್ಯಾದ್ಯಂತ ನಿನ್ನೆ ರಾತ್ರಿ10ರಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. 2 ವಾರಗಳ ಕಾಲ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುತ್ತದೆ.
 
ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಹೀಗಿದ್ದೂ, ರಾಜ್ಯದ ಹಲವೆಡೆ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬೇಕಾಬಿಟ್ಟಿ ಓಡಾಡುತ್ತಿದ್ದಾರೆ.

ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದ ಹಿನ್ನೆಲೆ ಬೆಂಗಳೂರು ಪಶ್ಚಿಮ ವಿಭಾಗದಲ್ಲಿ ಸುಮಾರು 111 ವಾಹನಗಳನ್ನ ಸೀಜ್ ಮಾಡಲಾಗಿದೆ. ಇದರಲ್ಲಿ ಮೂರು ಚಕ್ರದ 10 ವಾಹನ, 4 ಚಕ್ರದ 4 ವಾಹನ ಸೀಜ್ ಆಗಿವೆ. ಇನ್ನು ವಿಜಯಪುರದಲ್ಲಿ ವೀಕೆಂಡ್ ಕರ್ಪ್ಯೂಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕಂಡು ಬಂದಿಲ್ಲ. ಪ್ರಯಾಣಿಕರಿಗಾಗಿ ಬಸ್ಗಳು ಕಾದು ಕುಳಿತಿವೆ. ಆದರೆ ಕೊರೊನಾ ಕಾರಣದಿಂದ ಮೂರರಿಂದ ನಾಲ್ಕು ಜನ ಮಾತ್ರ ಪ್ರಯಾಣಿಕರು ಬರುತ್ತಿದ್ದಾರೆ.

ಆದರೆ ಮೈಸೂರಿನಲ್ಲಿ ಕೊರೊನಾ ಭಯವಿಲ್ಲದೆ ತರಕಾರಿ ಮಾರುಕಟ್ಟೆಯಲ್ಲಿ ಜನ ಜಂಗುಳಿ ಸೇರಿದೆ. ಸಾಮಾಜಿಕ ಅಂತರ ಮರೆತು ಖರೀದಿಸುತ್ತಿದ್ದಾರೆ. ಪೊಲೀಸರು ಜಾಗೃತಿ ಮೂಡಿಸಿದರು ಕಿವಿಕೊಡದ ಜನ, ಮಾಸ್ಕ್ ಸರಿಯಾಗಿ ಧರಿಸದೆ ಓಡಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ