ಕೋವಿಡ್‌ ಬಂದವರಿಗೆ ಬೆಚ್ಚಿ ಬೀಳಿಸುವಂತಹ ಸುದ್ದಿ!

ಶುಕ್ರವಾರ, 8 ಏಪ್ರಿಲ್ 2022 (10:12 IST)
ಲಂಡನ್ : ಕೋವಿಡ್ ಸೋಂಕಿಗೆ ತುತ್ತಾದ ಬಳಿಕದ 6 ತಿಂಗಳವರೆಗೆ ರೋಗಿಗಳು ರಕ್ತ ಹೆಪ್ಪುಗಟ್ಟುವಂತಹ ಸಮಸ್ಯೆಗಳಿಗೆ ಒಳಗಾಗುವ ಅಪಾಯದ ಸಾಧ್ಯತೆ ಹೆಚ್ಚು ಎಂದು ಅಧ್ಯಯನವೊಂದು ತಿಳಿಸಿದೆ.
 
ಕೋವಿಡ್ನ ಮಧ್ಯಮ ಪ್ರಮಾಣದ ರೋಗ ಲಕ್ಷಣಗಳನ್ನು ಹೊಂದಿದ್ದವರಿಗೂ ಈ ಸಮಸ್ಯೆ ಬಾಧಿಸುವ ಸಾಧ್ಯತೆ ಇರುತ್ತದೆ ಎಂದು ವರದಿ ಹೇಳಿದೆ. ಕೋವಿಡ್ನಿಂದ ಚೇತರಿಸಿಕೊಂಡವರಿಗೆ ಮುಂದಿನ 3 ತಿಂಗಳುಗಳಲ್ಲಿ ರಕ್ತನಾಳಗಳಲ್ಲಿ, ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಳ್ಳಬಹುದು.

ಶ್ವಾಸಕೋಶದಲ್ಲಿ ಮುಂದಿನ 6 ತಿಂಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಳ್ಳಬಹುದು. 2 ತಿಂಗಳುಗಳ ಕಾಲ ರಕ್ತಸ್ರಾವ ಕಾಣಿಸಿಕೊಳ್ಳಬಹುದು. ಕೋವಿಡ್ 2ನೇ ಮತ್ತು 3ನೇ ಅಲೆಯಲ್ಲಿ ರೋಗಕ್ಕೆ ತುತ್ತಾದವರಿಗಿಂತ ಮೊದಲ ಅಲೆಯಲ್ಲಿ ಕೋವಿಡ್ಗೆ ತುತ್ತಾದವರಿಗೆ ಇದರ ಪರಿಣಾಮ ಹೆಚ್ಚಾಗಿರುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಉನ್ನತ ಮಟ್ಟದ ಚಿಕಿತ್ಸೆ ಮತ್ತು ಕೋವಿಡ್ ಲಸಿಕೆ ಪಡೆದಿದ್ದು, 2 ಮತ್ತು 3ನೇ ಅಲೆಯ ಸೋಂಕಿತರ ಮೇಲಿನ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಿರುವ ಸಾಧ್ಯತೆ ಇದೆ ಎಂದು ವರದಿ ಹೇಳಿದೆ.

ಸ್ವೀಡನ್ನ ಉಮೆಯಾ ವಿಶ್ವವಿದ್ಯಾನಿಲಯ ಈ ಅಧ್ಯಯನವನ್ನು ನಡೆಸಿದ್ದು, 2020ರ ಫೆ.1ರಿಂದ 2021 ಮೇ 25ರವರೆಗೆ ಕೋವಿಡ್ಗೆ ತುತ್ತಾದ ಸುಮಾರು 10 ಲಕ್ಷ ಜನರನ್ನು ಅಧ್ಯಯಕ್ಕೆ ಒಳಪಡಿಸಲಾಗಿದೆ.

ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆ ಸಮಸ್ಯೆ ಕೋವಿಡ್ಗೆ ತುತ್ತಾದ 90 ದಿನಗಳ ನಂತರ ಹೆಚ್ಚಾಗಿದೆ. 180 ದಿನಗಳ ನಂತರ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹೆಚ್ಚಾಗಿದೆ. 60 ದಿನಗಳ ನಂತರ ರಕ್ತಸ್ರಾವ ಸಮಸ್ಯೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ