ರಷ್ಯಾ ಹಿನ್ನಡೆಗೆ ಕಾರಣ ಏನು?

ಗುರುವಾರ, 3 ಮಾರ್ಚ್ 2022 (09:35 IST)
ಕೀವ್ : ಉಕ್ರೇನ್-ರಷ್ಯಾ ಯುದ್ಧ ಏಳನೇ ದಿನ ಪೂರೈಸಿದೆ. ಆದರೆ ಈವರೆಗೂ ಉಕ್ರೇನ್ ಮೇಲೆ ರಷ್ಯಾ ಪೂರ್ಣ ಪ್ರಮಾಣದಲ್ಲಿ ಅಧಿಪತ್ಯ ಸ್ಥಾಪಿಸಿಲ್ಲ.

ಒಂದು ದೇಶದ ಮೇಲೆ ದಂಡೆತ್ತಿ ಹೋಗುವ ಸೈನ್ಯ ಮೊದಲು ಅಲ್ಲಿನ ವೈಮಾನಿಕ, ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳನ್ನು ಗಮನದಲ್ಲಿ ಇರಿಸಿಕೊಂಡು ದಾಳಿ ನಡೆಸುತ್ತದೆ. ಈ ಮೂಲಕ ಆ ದೇಶದ ವಾಯುಪ್ರದೇಶದ ಮೇಲೆ ಹಿಡಿತ ಸಾಧಿಸುತ್ತದೆ.

ಈ ಮೂಲಕ ಭೂಸೇನೆ ಸಮರ್ಥವಾಗಿ ಹೋರಾಟ ಸಾಗಿಸಲು ಅನುಕೂಲ ಕಲ್ಪಿಸುತ್ತದೆ. ಆದರೆ ಇದು ರಷ್ಯಾ ಕಡೆಯಿಂದ ಆಗಿಲ್ಲ. ಪರಿಣಾಮ, ಉಕ್ರೇನ್ ಯುದ್ಧ ವಿಮಾನಗಳು ಆರ್ಭಟಿಸುತ್ತಿವೆ.

ಕಡಿಮೆ ಎತ್ತರದಲ್ಲಿ ಹಾರುತ್ತಾ ರಷ್ಯಾದ ಹೆಲಿಕಾಪ್ಟರ್ಗಳನ್ನು ಟಾರ್ಗೆಟ್ ಮಾಡುತ್ತಿವೆ. ಸ್ಟಿಂಗರ್ ಕ್ಷಿಪಣಿ ಮೂಲಕವೂ ರಷ್ಯಾದ ಹೆಲಿಕಾಪ್ಟರ್ ನಾಶ ಮಾಡಲಾಗುತ್ತಿದೆ.  

ಯುದ್ಧಕ್ಕೆ ರಷ್ಯಾ ಸೈನಿಕರ ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ರಷ್ಯಾದ ಯುವ ಸೈನಿಕರಿಗೆ ಸರಿಯಾದ ಶಿಕ್ಷಣ ಸಿಕ್ಕಿಲ್ಲ. ಆತ್ಮಸ್ಥೈರ್ಯ ಕಡಿಮೆ. ಆಹಾರ, ಇಂಧನ ಕೊರತೆ ಕಾಡುತ್ತಿದೆ. ತಮ್ಮ ವಾಹನಗಳನ್ನು ತಾವೇ ಉದ್ದೇಶಪೂರ್ವಕವಾಗಿ ಪಂಕ್ಚರ್ ಮಾಡುತ್ತಿದ್ದಾರೆ. ಉಕ್ರೇನ್ ನಗರಗಳ ಮೇಲೆ ದಾಳಿಗೆ ರಷ್ಯನ್ ಸೈನಿಕರು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳ ಜೊತೆ ವಾಗ್ವಾದ ನಡೆಸಿದ್ದಾರೆ ಎಂದು ಅಮೆರಿಕದ ಪೆಂಟಗಾನ್ ವರದಿ ಮಾಡಿದೆ.

.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ