ಬೆಂಗಳೂರು : “ಅನುಚಿತ ಗುಂಪಷ್ಟೇ ವಿವಾದವನ್ನು ಜೀವಂತವಾಗಿಡಬಲ್ಲದು ಮತ್ತು ಸಂವಿಧಾನದ ಮೇಲೆ ಎಲ್ಲರೂ ನಂಬಿಕೆ ಇಡಬೇಕು ಹಾಗೂ ಶಾಂತಿ ಕಾಪಾಡುವಂತೆ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಮನವಿ”
ಇದು ಜನತೆಯಲ್ಲಿ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಎಎಸ್ ದೀಕ್ಷಿತ್ ನೇತೃತ್ವದ ಏಕಸದಸ್ಯ ಪೀಠ ಮಾಡಿರುವ ಮನವಿ.
ಕಾಲೇಜಿಗೆ ಹಿಜಬ್ ಧರಿಸಿ ಹೋಗಲು ಅವಕಾಶ ನೀಡುವಂತೆ ಕೋರಿ ಉಡುಪಿ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಾಳೆ ಮಧ್ಯಾಹ್ನ 2:30ಕ್ಕೆ ಪೀಠ ಮುಂದೂಡಿದೆ.
ಇವತ್ತು ವಿದ್ಯಾರ್ಥಿನಿಯರ ಪರ ವಕೀಲ ದೇವದತ್ ಕಾಮತ್ ಅವರಷ್ಟೇ ವಾದ ಮಂಡನೆ ಮಾಡಿದರು. ಮಧ್ಯಾ ಹ್ನ 1 ಗಂಟೆಗೆ ಶುರುವಾದ ವಿಚಾರಣೆ ಸಂಜೆ 4:30ರವರೆಗೂ ನಡೆಯಿತು. ವಾದ-ಪ್ರತಿವಾದದ ಆಲಿಸಿದ ಬಳಿಕ ಇವತ್ತೇ ತೀರ್ಪು ಹೊರಬರಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ ನಾಳೆ ಮಧ್ಯಾಹ್ನ 2:30ಕ್ಕೆ ವಿಚಾರಣೆಯನ್ನು ನ್ಯಾಯಮೂರ್ತಿ ಜೆಎನ್ ದೀಕ್ಷಿತ್ ನೇತೃತ್ವದ ಪೀಠ ಮುಂದೂಡಿದೆ. ರಾಜ್ಯದಲ್ಲಿ ನಡೆಯುತ್ತಿರುವ ಗಲಭೆಗಳ ಬಗ್ಗೆ ನ್ಯಾಯಮೂರ್ತಿಗಳು ತೀವ್ರ ಕಳವಳ ವ್ಯಕ್ತಪಡಿಸಿದರು. ಆದಷ್ಟು ಬೇಗ ತೀರ್ಪು ನೀಡುವುದಾಗಿ ತಿಳಿಸಿದರು.
ಶಾಲೆಗಳಲ್ಲಿ ಯಾರೋ ನಾಮ ಧರಿಸಿ ಬಂದರೆ, ಹಿಜಬ್ ಧರಿಸಿ ಬಂದರೆ, ಕ್ರಾಸ್ ಧರಿಸಿ ಬಂದರೆ ಅದು ಸಕಾರಾತ್ಮಕ ಜ್ಯಾತ್ಯಾತೀತತೆ. ನಾಲ್ಕೈದು ದಿನಗಳಿಂದ ಹಿಜಬ್ ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಕಾಲೇಜುಗಳಲ್ಲಿ ಪ್ರತ್ಯೇಕ ಕೊಠಡಿಗಳನ್ನು ಮಾಡಲಾಗಿದೆ.
ಹಿಜಬ್ ಧರಿಸಿದ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ಕೂರಿಸಿದ್ದು `ಧಾರ್ಮಿಕ ಅಸ್ಪ್ರಶ್ಯತೆ. ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಕಾನೂನು ಮಾಡಬಹುದು, ಬಾರ್ ಕೌನ್ಸಿಲ್ ರೀತಿಯಲ್ಲೇ. ಆದರೆ ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರಬಹುದೇ ಎಂಬುದೇ ಪ್ರಶ್ನೆ.