ಮೇಲ್ಮನೆಯ ಕಲಾಪ ಸುಗಮವಾಗಿ ನಡೆಯುವ ಸಲುವಾಗಿ ವರ್ಚ್ಯುಯಲ್ ಸಭೆ ನಡೆಯಲಿದೆ. ಪೆಗಾಸಸ್, ಹೆಚ್ಚುತ್ತಿರುವ ನಿರುದ್ಯೋಗ, ತೈಲ ಬೆಲೆ ಏರಿಕೆ, ಕೊರೋನಾ ಸೋಂಕು, ಅಮರ್ ಜವಾನ್ ಜ್ಯೋತಿ ಸ್ಥಳಾಂತರ ಮುಂತಾದ ವಿಷಯಗಳ ಬಗ್ಗೆ ವಿರೋಧ ಪಕ್ಷಗಳು ಪ್ರಸ್ತಾಪಿಸುವ ಸಾಧ್ಯತೆ ಇದೆ.
ಈ ಹಿನ್ನೆಲೆ ಅಧಿವೇಶನ ಸುಗಮವಾಗಿ ಸಾಗುವಂತೆ ಮಾಡಲು ಈ ಸಭೆ ನಡೆಸಲಾಗುವುದು. ಬಜೆಟ್ ಅಧಿವೇಶನದ ಮೊದಲಾರ್ಧ ಜ.31 ರಿಂದ ಫೆ.11 ರವರೆಗೆ ನಡೆಯಲಿದೆ. ಮಾರ್ಚ್ 14 ರಂದು ಮತ್ತೆ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಏ.೮ರವರೆಗೆ ನಡೆಯಲಿದೆ. ಫೆ.1 ರಂದು ಸರ್ಕಾರ 2022-23 ನೇ ಸಾಲಿನ ಬಜೆಟ್ ಮಂಡಿಸಲಿದೆ.