BPL, APL, ಅಂತ್ಯೋದಯ ಕಾರ್ಡ್ನಲ್ಲಿ ಮನೆಯೊಡತಿಯ ಹೆಸರಿರಬೇಕು. ಒಂದು ಮನೆಯಲ್ಲಿ ಒಬ್ಬರಿಗೆ ಮಾತ್ರ ಯೋಜನೆ ಅನ್ವಯವಾಗಲಿದೆ.
ಯಜಮಾನಿಯ ಮೊಬೈಲ್ ನಂಬರ್ ಕಡ್ಡಾಯವಾಗಿ ಬೇಕಾಗುತ್ತದೆ. ಬೆಂಗಳೂರು ಒನ್ ಅಥವಾ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ನಂ. ಲಿಂಕ್ ಆಗಿರಬೇಕು.
ಯಜಮಾನಿ ಅಥವಾ ಪತಿ ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಮನೆ ಒಡತಿಯ ಯಜಮಾನ ಜಿಎಸ್ಟಿ ರಿರ್ಟನ್ಸ್ ಮಾಡಿರಬಾರದು ಎಂಬ ಮಾನದಂಡಗಳನ್ನು ಅನುಸರಿಸಲಾಗಿದೆ .
ಯೋಜನೆಗೆ ಏನೇನು ದಾಖಲೆ ಬೇಕು..?
ಹೊಸ ಅಪ್ಲಿಕೇಷನ್ ಬೆಂಗಳೂರು ಒನ್ ಕೇಂದ್ರಗಳಲ್ಲಿ ಮತ್ತು ಮೊಬೈಲ್ನಲ್ಲಿ ಲಭ್ಯವಿರುತ್ತಾ? ಎಂಬ ಬಗ್ಗೆ ಇಂದು( ಬುಧವಾರ) ಸ್ಪಷ್ಟತೆ ಸಿಗಲಿದೆ.
ಯೋಜನೆಗೆ ಏನೇನು ದಾಖಲೆ ಬೇಕು..? ಯಾರು ಫಲಾನುಭವಿಗಳು ಎನ್ನುವ ಬಗ್ಗೆ ಜನ್ರಲ್ಲಿ ಇಂದಿಗೂ ಗೊಂದಲಗಳಿದ್ದು, ಇಂದು ಎಲ್ಲಾ ಗೊಂದಲಗಳಿಗೂ ತೆರೆ ಬೀಳುವ ಸಾಧ್ಯತೆ ಇದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಯಾವಾಗ ಎನ್ನುವುದಕ್ಕೂ ಮುಹೂರ್ತ ಫಿಕ್ಸ್ ಆಗಲಿದೆ.