ನರೇಂದ್ರ ಮೋದಿ ಪತ್ನಿ ಜಶೋಧಾಬೆನ್ ಬೇಸರಗೊಂಡಿದ್ದು ಯಾಕೆ ಗೊತ್ತೇ?
ಗುರುವಾರ, 21 ಜೂನ್ 2018 (08:43 IST)
ಅಹ್ಮದಾಬಾದ್ : ಮಧ್ಯ ಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್ ಅವರು ಪ್ರಧಾನಿ ನರೇಂದ್ರಮೋದಿಯವರು ಅವಿವಾಹಿತರು ಎಂದು ಹೇಳಿಕೆ ನೀಡಿರುವುದಕ್ಕೆ ಇದೀಗ ಅವರಪತ್ನಿ ಜಶೋಧಾಬೆನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಹಿಂದಿನ ಲೋಕಸಭಾ ಎಲೆಕ್ಷನ್ ಸಂದರ್ಭ ಮೋದಿ 2004ರಲ್ಲಿ ಜಶೋಧಾಬೆನ್ ಅವರನ್ನು ಮದುವೆಯಾಗಿರುವುದಾಗಿ ಪೇಪರ್ ನಲ್ಲಿ ಡಿಕ್ಲೇರ್ ಮಾಡಿದ್ದರು. ಆದರೆ ಮಧ್ಯ ಪ್ರದೇಶದ ಗವರ್ನರ್ ಆನಂದಿಬೆನ್ ಪಟೇಲ್ ಅವರು ಲೀಡಿಂಗ್ ಗುಜರಾತಿ ಪತ್ರಿಕೆಯೊಂದಕ್ಕೆ ಈ ರೀತಿಯಾಗಿ ಹೇಳಿಕೆ ನೀಡುರುವುದಕ್ಕೆ ಮೋದಿಯವರ ಪತ್ನಿ ಜಶೋಧಾಬೆನ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
‘ಅವರ ಹೇಳಿಕೆಯಿಂದ ನನಗೆ ಶಾಕ್ ಆಗಿದೆ. ಗುಜರಾತ್ ನ ಮಾಜಿ ಮುಖ್ಯಮಂತ್ರಿಯಾಗಿರುವ ಆನಂದಿಬೆನ್ ಒಬ್ಬ ಶಿಕ್ಷಕಿಯಾಗಿ ನನ್ನ ಬಗ್ಗೆ ಹೀಗೆ ಹೇಳುವುದು ಸರಿಯಲ್ಲ. ಅಲ್ಲದೆ ಮೋದಿಯವರು ಗೌರವಾನ್ವಿತ ವ್ಯಕ್ತಿಯಾಗಿದ್ದು, ಅವರು ನನಗೆ ರಾಮನಂತೆ’ ಎಂದು ಜಶೋಧಾಬೆನ್ ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ