ರಾಜ್ಯದಲ್ಲಿ ಟ್ರಾಫಿಕ್ ಡಿಸ್ಕೌಂಟ್ ಗೆ ವ್ಯಾಪಕ ಬೆಂಬಲ

ಶುಕ್ರವಾರ, 10 ಫೆಬ್ರವರಿ 2023 (07:23 IST)
ಬೆಂಗಳೂರು : ರಾಜ್ಯದಲ್ಲಿ 50% ಟ್ರಾಫಿಕ್ ಡಿಸ್ಕೌಂಟ್ ಗೆ ವ್ಯಾಪಕ ಬೆಂಬಲ ಸಿಕ್ಕಿದೆ. ಈ ಆಫರ್ ಮಸ್ತ್ ಆಗಿ ಯೂಸ್ ಮಾಡಿಕೊಂಡ ಸಾರ್ವಜನಿಕರು ಕೋಟಿ ಕೋಟಿ ದಂಡವನ್ನು ಕಟ್ಟಿ ತಮ್ಮ ಕೇಸ್ಗಳನ್ನು ಕ್ಲಿಯರ್ ಮಾಡಿಕೊಳ್ತಾ ಇದ್ದಾರೆ.

ಸಂಚಾರಿ ಪೊಲೀಸರ ಖಜಾನೆಗೆ ಬಂದು ಬಿಳುತ್ತಿದೆ ಕೋಟಿ ಕೋಟಿ ದಂಡದ ಹಣ. 6 ದಿನದಲ್ಲಿ 51 ಕೋಟಿ ದಂಡ ವಸೂಲಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ವಾಹನ ಸವಾರರು ಟ್ರಾಫಿಕ್ ವೈಲೇಷನ್ ಮಾಡಿದ ಕಾರಣ, ಸಾವಿರಾರು ರೂಪಾಯಿ ದಂಡದ ಮೊತ್ತ ಬ್ಯಾಲೆನ್ಸ್ ಇಟ್ಟುಕೊಂಡಿದ್ದರು.  

ದಂಡ ವಸೂಲಿಗೆ ರಿಯಾಯಿತಿ ಬೆನ್ನಲ್ಲೇ ವಾಹನ ಸವಾರರು ಕಳೆದ 6 ದಿನದಿಂದ ನಿರಂತರವಾಗಿ ಸರತಿ ಸಾಲಿನಲ್ಲಿ ನಿಂತು ದಂಡ ಕಟ್ಟುತ್ತಿದ್ದಾರೆ. ಆರು ದಿನದಲ್ಲಿ ಬರೋಬ್ಬರಿ 51 ಕೋಟಿ 85 ಲಕ್ಷ ದಂಡದ ಮೊತ್ತ ಸಂಗ್ರಹವಾಗಿದೆ. ಮುಂದಿನ ಫೆಬ್ರವರಿ 11ರವರೆಗೂ ರಿಯಾಯಿತಿ ಅವಧಿ ಇದ್ದು, ಮುಂದಿನ ಮೂರು ದಿನದಲ್ಲಿ 70 ಕೋಟಿಗೂ ಅಧಿಕ ಮೊತ್ತ ರೀಚ್ ಆಗುವ ನಿರೀಕ್ಷೆ ಇದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ