6 ತಿಂಗಳ ಒಳಗಾಗಿ ಸಿಗಲಿದೆ : ಆದಾರ್ ಪೂನಾವಾಲ

ಮಂಗಳವಾರ, 16 ಆಗಸ್ಟ್ 2022 (09:09 IST)
ಪುಣೆ : ಕೊರೊನಾ ರೂಪಾಂತರಿ ಬಿಎ5 ಓಮಿಕ್ರಾನ್ ವೈರಸ್ ವಿರುದ್ಧ ಹೋರಾಡಲು ನಿರ್ದಿಷ್ಟ ಲಸಿಕೆ ತಯಾರಿಸಲು ನೋವಾವ್ಯಾಕ್ಸ್ನೊಂದಿಗೆ ಸೀರಂ ಇನ್ಸಿಟ್ಯೂಟ್ ಕೆಲಸ ಮಾಡುತ್ತಿದೆ.

ಮಾಧ್ಯಮವೊಂದರ ಸಂದರ್ಶನದಲ್ಲಿ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲ ಹೇಳಿದ್ದಾರೆ.

ವಿಶೇಷವಾಗಿ ಓಮಿಕ್ರಾನ್ ಸೋಂಕಿನ ವಿರುದ್ಧ ಹೋರಾಟ ನಡೆಸಲು ಲಸಿಕೆಯನ್ನು ತಯಾರು ಮಾಡಲಾಗುತ್ತಿದೆ. 6 ತಿಂಗಳಲ್ಲಿ ಈ ಲಸಿಕೆ ಪ್ರಯೋಗಿಕವಾಗಿ ಅನುಮೋದನೆ ಪಡೆದು ಬರುವ ನಿರೀಕ್ಷೆ ಇದೆ.

ಈಗಾಗಲೇ ಓಮಿಕ್ರಾನ್ ವೈರಸ್ ವಿರುದ್ಧ ಪರಿಣಾಮಕಾರಿಯಾಗಿರುವ ಮಾಡೆರ್ನಾ ಲಸಿಕೆಗೆ ಬ್ರಿಟನ್ ಅನುಮೋದನೆ ನೀಡಿತ್ತು. ಈ ಲಸಿಕೆ ಓಮಿಕ್ರಾನ್ ತಳಿ ಮತ್ತು ಮೂಲ ರೂಪದ ವಿರುದ್ಧ ಪರಿಣಾಮಕಾರಿಯಾಗಿದೆ.

ಈ ಲಸಿಕೆ ಬೂಸ್ಟರ್ ಡೋಸ್ನಂತೆ ಕಾರ್ಯನಿರ್ವಹಿಸಲಿದೆ. ಇದೀಗ ನಮ್ಮ ದೇಶಕ್ಕೂ ಓಮಿಕ್ರಾನ್ ವಿರುದ್ಧ ನಿರ್ದಿಷ್ಟ ಲಸಿಕೆ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ