ಬೇಸಿಗೆಗೆ ನಿಮ್ಮ ಮುಖದ ಆರೈಕೆಗೊಂದಿಷ್ಟು ಟಿಪ್ಸ್ ಇಲ್ಲಿದೆ ನೋಡಿ!

ಗುರುವಾರ, 3 ಮೇ 2018 (11:54 IST)
ಬೆಂಗಳೂರು:  ಬೇಸಿಗೆಯಲ್ಲಿ ಮುಖವನ್ನು ಸೂರ್ಯನ ಬೆಳಕಿಗೊಡ್ಡುವುದರಿಂದ ಸಾಕಷ್ಟು ಹಾನಿಗೊಳಗಾಗುತ್ತದೆ. ಮುಖವೂ ಕೂಡ ತನ್ನ ಅಂದವನ್ನು ಕಳೆದುಕೊಳ್ಳುತ್ತದೆ. ಸೂಕ್ತ ಆರೈಕೆಯ ಮೂಲಕ ಮುಖವನ್ನು ಅಂದಗಾಣಿಸಬಹುದು. ಇಲ್ಲಿದೆ ನೋಡಿ ಒಂದಷ್ಟು ಫೇಸ್ ಪ್ಯಾಕ್ ಗಳು.

ಬಾದಾಮಿ ಪೇಸ್ ಪ್ಯಾಕ್: ಎರಡು ಚಮಚ ಬಾದಾಮಿ ಎಣ್ಣೆ ಮತ್ತು 2-3 ಹನಿ ಜೊಜೊಬಾ ಎಣ್ಣೆ ತೆಗೆದುಕೊಂಡು ಮಿಶ್ರಣ ಮಾಡಿ. ನಿಧಾನವಾಗಿ ತ್ವಚೆಗೆ ಮಸಾಜ್ ಮಾಡಿ. ವೃತ್ತಾಕಾರದಲ್ಲಿ ಮಸಾಜ್ ಮಾಡಿ. ಇದು ರಕ್ತಸಂಚಾರ ಹೆಚ್ಚಿಸುವುದು. ಇದರಿಂದ ತ್ವಚೆಗೆ ಕಾಂತಿಯು ಸಿಗುವುದು. ಇದರಲ್ಲಿ ಇರುವ ವಿಟಮಿನ್ ತ್ವಚೆಗೆ ಒಳ್ಳೆಯ ಪೋಷಕಾಂಶ ನೀಡುವುದು.


ರಾತ್ರಿ ಮಲಗುವ ಮೊದಲು ಲಿಂಬೆ ಮತ್ತು ಹಾಲಿನ ಕ್ರೀಮ್ ಪ್ಯಾಕ್ ಅನ್ನು ಹಚ್ಚಿಕೊಂಡರೆ ಬೆಳಿಗ್ಗೆ ಎದ್ದಾಗ ನಿಮ್ಮ ಮುಖ ಕಾಂತಿಯುತವಾಗುತ್ತದೆ. ಒಂದು ಚಮಚ ಲಿಂಬೆ ರಸ ಮತ್ತು ¼ ಚಮಚ ಹಾಲಿನ ಕ್ರೀಮ್ ತೆಗೆದುಕೊಳ್ಳಿ. ಇದನ್ನು ಚರ್ಮದ ಮೇಲೆ ಹಚ್ಚಿಕೊಳ್ಳಿ. ರಾತ್ರಿ ಹಾಗೆ ಬಿಟ್ಟು ಬೆಳಿಗ್ಗೆ ತೊಳೆಯಿರಿ.

ಓಟ್ಸ್ ಮತ್ತು ಜೇನುತುಪ್ಪ: ಫೇಸ್ ಮಾಸ್ಕ್ ಮುಖಕ್ಕೆ ಕಾಂತಿ ನೀಡುವುದು ಮಾತ್ರವಲ್ಲದೆ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುವುದು.. ಎರಡು ಚಮಚ ಜೇನುತುಪ್ಪದೊಂದಿಗೆ ಎರಡು ಚಮಚ ಓಟ್ಸ್ ಸೇರಿಸಿಕೊಳ್ಳಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಮುಖಕ್ಕೆ ಹಚ್ಚಿ. ರಾತ್ರಿಯಿಡಿ ಹಾಗೆ ಬಿಟ್ಟು ಮರುದಿನ ಬೆಳಗ್ಗೆ ಮುಖ ತೊಳೆಯಿರಿ.


 

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ