ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಬಹುದು ; ಸುಪ್ರೀಂಕೋರ್ಟ್ ನಿಂದ ಮಹತ್ವದ ತೀರ್ಪು

ಶುಕ್ರವಾರ, 28 ಸೆಪ್ಟಂಬರ್ 2018 (12:02 IST)
ನವದೆಹಲಿ : ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯರು ತೆರಳಿ ದರ್ಶನ ಪಡೆಯಬಹುದೆಂದು ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪನ್ನು ಪ್ರಕಟಿಸಿದೆ.


ಐವರು ಸದಸ್ಯರನ್ನೊಳಗೊಂಡ  ಸಾಂವಿಧಾನಿಕ ಪೀಠ ಈ ಮಹತ್ವದ ತೀರ್ಪನ್ನು ನೀಡಿದೆ. ಹಿಂದಿನಿಂದಲೂ ಶಬರಿಮಲೆಯ ಅಯ್ಯಪ್ಪ ದೇವರು ಬ್ರಹ್ಮಚಾರಿ ಎನ್ನುವ ಕಾರಣಕ್ಕೆ ದೇಗುಲಕ್ಕೆ ಋತುಸ್ರಾವದ ವಯೋಮಾನದ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.


ಶರೀರದ ಆಧಾರದಲ್ಲಿ ಭೇದ ಬಾವ ಮಾಡಬಾರದು. ಪಾರ್ಥನೆಗೆ ಮಹಿಳೆ-ಪುರುಷ ಎಂದು ತಾರತಮ್ಯ ಮಾಡಬಾರದು. ಮಹಿಳೆಯರನ್ನು ದುರ್ಬಲರಂತೆ ನೋಡಬಾರದು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದರ ಮೂಲಕ ಮಹಿಳೆಯರಿಗೂ ಅಯ್ಯಪ್ಪ ಸ್ವಾಮಿಯ ದರ್ಶನ ಭಾಗ್ಯ ಕರುಣಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ