ನವದೆಹಲಿ :ಗಂಡನೇ ಎಲ್ಲದಕ್ಕೂ ಮುಖ್ಯಸ್ಥನಲ್ಲ, ಅನೈತಿಕ ಸಂಬಂಧ ಅಪರಾಧವಾಗುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸೇರಿ ಐವರು ನ್ಯಾಯಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠ ತೀರ್ಪು ನೀಡಿದೆ.
ಐಪಿಸಿ ಸೆಕ್ಷನ್ 497ರ ಸಿಂಧುತ್ವ ಪ್ರಶ್ನಿಸಿ ಜೋಸೆಫ್ ಶೈನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ನ ಐವರು ನ್ಯಾಯಾಧೀಶರ ಪೀಠ ಈ ರೀತಿ ಹೇಳಿದೆ.
ಸಂವಿಧಾನದ 14ನೇ ವಿಧಿಯ ನೆಲೆಯಲ್ಲಿ ಐಪಿಸಿಯ ಸೆಕ್ಷನ್ 497 ಕ್ರಿಮಿನಲ್ ಅಪರಾಧವಾಗಿ ಉಳಿಯಲು ಸಾಧ್ಯವಿರುವ ಬಗ್ಗೆ ಅಂತಿಮ ತೀರ್ಪು ನೀಡಿದೆ. ಈ ಹಿಂದೆ ಒಂದು ವೇಳೆ ಅನೈತಿಕ ಸಂಬಂಧಗಳಿಗೆ ಕೇವಲ ಗಂಡಸರನ್ನೇ ಹೊಣೆ ಮಾಡಿದರೆ ಸಂವಿಧಾನದ 14ನೇ ವಿಧಿಯಲ್ಲಿ(ಕಾನೂನಿನ ಮುಂದೆ ಎಲ್ಲರೂ ಸಮಾನರು) ನೀಡುವ ಲಿಂಗ ಸಮಾನತೆಗೆ ಅಡ್ಡಿಯಾಗುವಂತೆ ತೋರುತ್ತದೆ ಅಂತ ನ್ಯಾಯಾಪೀಠ ವಿಚಾರಣೆ ವೇಳೆ ಅಭಿಪ್ರಾಯ ಪಟ್ಟಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.