ಔಷಧ-ಫಿಟ್ನೆಸ್ ಉತ್ಪನ್ನ ಪೂರೈಕೆ ಬಂದ್ ಮಾಡಿದ 'ಜೊಮ್ಯಾಟೊ'

ಸೋಮವಾರ, 13 ಸೆಪ್ಟಂಬರ್ 2021 (11:09 IST)
2020ರಲ್ಲಿ ಭಾರಿ ಮಹತ್ವಾಕಾಂಕ್ಷೆಯಿಂದ ಆನ್ಲೈನ್ ಫುಡ್ ಡೆಲಿವರಿ ಕಂಪನಿ 'ಜೊಮ್ಯಾಟೊ' ಆರಂಭಿಸಿದ್ದ 'ನ್ಯೂಟ್ರಾಸಿಕಲ್' ವ್ಯಾಪಾರ ಬಂದ್ ಮಾಡುತ್ತಿದೆ.

ವೈದ್ಯಕೀಯ, ಆರೋಗ್ಯ ವರ್ಧಕ ಉತ್ಪನ್ನಗಳ ಮಾರಾಟದಿಂದ ಲಾಭದ ನಿರೀಕ್ಷೆಯಲ್ಲಿದ್ದ ಕಂಪನಿಯು, ಸರ್ಕಾರವು ಈ ಸಂಬಂಧ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುವ ಸುಳಿವು ಸಿಕ್ಕಿದೆ.
ವೈದ್ಯರ ಚೀಟಿ, ಸರಿಯಾದ ದಾಖಲೆಗಳಿದ್ದರೆ ಮಾತ್ರವೇ ಯಾವುದೇ ವೈದ್ಯಕೀಯ ಮತ್ತು ಆರೋಗ್ಯಕ್ಕೆ ಸಂಬಂಧಿತ ಔಷಧಗಳು, ಪೂರಕ ಆಹಾರ ಉತ್ಪನ್ನಗಳ ಮಾರಾಟಕ್ಕೆ ಇನ್ಮುಂದೆ ಅವಕಾಶ ಇರಲಿದೆ.
ಆನ್ಲೈನ್ ಮೂಲಕ ಹೆಚ್ಚುತ್ತಿರುವ ಔಷಧಗಳ ಮಾರಾಟದ ಮೇಲೆ ನಿಗಾ ಇರಿಸಲು ಸರ್ಕಾರವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡುತ್ತಿದೆ.
ಇನ್ನು ದಿನಸಿ ಮಾರಾಟ ಸಂಬಂಧ ಬಿಗ್ ಬ್ಯಾಸ್ಕೆಟ್, ಸ್ವಿಗ್ಗಿ, ಡುನ್ಜೊದಿಂದ ಭಾರಿ ಪೈಪೋಟಿಯನ್ನು ಜೊಮ್ಯಾಟೊ ಎದುರಿಸುತ್ತಿದೆ. ಅಲ್ಲದೆ, ಕಂಪನಿಯು ಈಗಾಗಲೇ 'ಗ್ರಾಫರ್ಸ್' ಹೆಸರಿನ ದಿನಬಳಕೆ ವಸ್ತುಗಳ ಆನ್ಲೈನ್ ಮಾರಾಟ ವೇದಿಕೆ ಮೇಲೆ ಹೂಡಿಕೆ ಮಾಡಿದ್ದು, ಅದರಲ್ಲಿ ಲಾಭ ಗಳಿಸುವ ನಿರೀಕ್ಷೆಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ