ಬಿಜೆಪಿ ಬಜೆಟ್ ಕಾರ್ಪೊರೇಟ್‌ಗಳ ಪರವಾಗಿರಲಿದೆ: ಕಾಂಗ್ರೆಸ್ ಟೀಕೆ

ಮಂಗಳವಾರ, 14 ನವೆಂಬರ್ 2017 (19:12 IST)
ಬಿಜೆಪಿಯ ಪೂರ್ಣವರ್ಷಾವಧಿಯ ಬಜೆಟ್ ಪೊಳ್ಳು ಎಂದು ವಿರೋಧ ಪಕ್ಷ ಟೀಕಿಸಿದ್ದು, ಇದು ಮುನ್ನೋಟದ ಕೊರತೆ ಹೊಂದಿದ್ದು, ಶ್ರೀಮಂತ ಮತ್ತು ಕಾರ್ಪೊರೇಟ್‌ಗಳಿಗೆ ಬಿಜೆಪಿ ಸರ್ಕಾರ ನೆರವಾಗಲಿದೆ ಎನ್ನುವ ಅನುಮಾನ ಕಾಡುತ್ತಿದೆ. 
ಈ ಬಜೆಟ್ ಕೇವಲ ದೊಡ್ಡ ಕಾರ್ಪೊರೇಟ್‌ಗಳಿಗೆ ಮತ್ತು ಕೈಗಾರಿಕೆಗಳಿಗೆ ಅನುಕೂಲ ಮಾಡಿದೆ.ಇದು ಬಡವರ ಪರ ಬಜೆಟ್ ಇಲ್ಲ. ಲೋಕಸಭೆ ಚುನಾವಣೆಯಲ್ಲಿ ತಮಗೆ ಬೆಂಬಲಿಸಿದ ಶ್ರೀಮಂತರಿಗೆ ಮತ್ತು ಕಾರ್ಪೊರೇಟ್‌ಗಳಿಗೆ ಮರುಪಾವತಿ ಮಾಡಿದೆ. ಬಜೆಟ್ ಬರೀ ಭರವಸೆಗಳ ಮೇಲೆ ನಿಂತಿದೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಇದೊಂದು ಪೊಳ್ಳು ಬಜೆಟ್ ಎಂದು ಜ್ಯೋತಿರಾಧಿತ್ಯಾ ಸಿಂಧ್ಯ ಟೀಕಿಸಿದ್ದಾರೆ.
 
ಜೈರಾಂ ರಮೇಶ್ ಈ ಬಜೆಟ್ ಧನ್‌ವಾಪ್ಸಿ ಕಾರ್ಯಕ್ರಮವಾಗಿದ್ದು, ಅವರು ಚುನಾವಣೆಗೆ ಹಣ ಪಡೆದಿದ್ದರು. ಈಗ ವಾಪಸು ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಬಡವರಿಗೆ ಅಚ್ಚೇ ದಿನ್ ಒದಗಿಸುವಲ್ಲಿ ಬಜೆಟ್ ವಿಫಲವಾಗಿದೆ ಎಂದು ಟೀಕಿಸಿದ ಬಿಎಸ್‌ಪಿ ಮುಖಂಡೆ ಮಾಯಾವತಿ ಉದ್ಯಮಿಗಳಿಗೆ ಮಣೆ ಹಾಸಿದೆ. ಇದು ಜನಸಾಮಾನ್ಯರ ಹಿಸಾಕ್ತಿಯಿಂದ ಕೂಡಿಲ್ಲ. ಶ್ರೀಮಂತರು ಮತ್ತು ಬಂಡವಾಳಶಾಹಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ನಿರ್ಮಿಸಲಾಗಿದೆ ಎಂದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ