ಮದುವೆಯಾಗುತ್ತಿದ್ದೀರಾ? ಹಾಗಿದ್ದರೆ ಇದರ ಬಗ್ಗೆ ತಿಳಿದುಕೊಳ್ಳಲೇ ಬೇಕು!

ಭಾನುವಾರ, 2 ಸೆಪ್ಟಂಬರ್ 2018 (08:38 IST)
ಬೆಂಗಳೂರು: ಸದ್ಯದಲ್ಲೇ ಮದುವೆಯಾಗುವ ಯೋಜನೆ ಹೊಂದಿದ್ದೀರಾ? ಹಾಗಿದ್ದರೆ ಈ ಕೆಳಗಿನ ಕೆಲವು ಅಂಶಗಳ ಬಗ್ಗೆ ಗಮನಹರಿಸಿ.

ಮದುವೆ ಎನ್ನುವುದು ಎರಡು ಜೀವಗಳ ಸಮ್ಮಿಲನ. ಇದರಲ್ಲಿ ಇಬ್ಬರದ್ದೂ ಸಮಪಾಲು. ಹಾಗಿರುವಾಗ ಕೆಲವೊಂದು ತ್ಯಾಗಗಳಿಗೆ ನಿವು ತಯಾರಿರಲೇ ಬೇಕು. ಹಾಗಾಗಿ ನಿಮ್ಮ ಇಷ್ಟಗಳನ್ನು ಕೆಲವೊಮ್ಮೆ ಸಂಗಾತಿಗಾಗಿ ತ್ಯಾಗ ಮಾಡಲು ಸಿದ್ಧರಾಗಿದ್ದೀರಾ ಎಂದು ಪ್ರಶ್ನಿಸಿಕೊಳ್ಳಿ.

ಸಣ್ಣ ಪುಟ್ಟ ವಿಷಯಗಳಲ್ಲೂ ಖುಷಿಪಡಲು ಕಲಿಯಿರಿ. ಮದುವೆಯಾದ ಮೇಲೆ ಸಂಗಾತಿ ಜತೆಗೆ ಧ್ವೇಷ ಕಟ್ಟಿಕೊಳ್ಳುವುದು, ತಿರುಗೇಟು ಕೊಡುವುದಕ್ಕೆಲ್ಲಾ ಚಾನ್ಸ್ ಸಿಗಲ್ಲ!

ಸಂಗಾತಿಯ ಅಪ್ಪ-ಅಮ್ಮನನ್ನು ಕೇರ್ ಮಾಡಬೇಕೆಂದರೆ ಮೂಗು ಮುರಿಯಬೇಡಿ. ನಿಮಗೆ ಡಬಲ್ ಅಪ್ಪ,ಅಮ್ಮನ ಖುಷಿ ಸಿಗುತ್ತದೆ ಎಂದು ಸಂತೋಷಪಡಿ. ಇಬ್ಬರೂ ಮೊದಲು ಸ್ನೇಹಿತರಾಗಿ. ಉತ್ತಮ ಸ್ನೇಹಿತರಾದರೆ ಉತ್ತಮ ಸಂಗಾತಿಗಳಾಗಬಹುದು ಎಂಬುದನ್ನು ಮರೆಯದಿರಿ. ಸಂಗಾತಿ ಮೇಲೆ ಸದಾ ವಿಶ್ವಾಸವಿಡುವುದನ್ನು ಮರೆಯಬೇಡಿ. ಸಣ್ಣ ಪುಟ್ಟದ್ದಕ್ಕೆಲ್ಲಾ ಸಂಶಯಿಸುವುದನ್ನು ಬಿಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ