ಮೊದಲ ರಾತ್ರಿ ದಿನ ಹೆಣ್ಣು ಪತಿಯಿಂದ ಬಯಸುವುದು ಏನನ್ನು?

ಮಂಗಳವಾರ, 11 ಸೆಪ್ಟಂಬರ್ 2018 (09:33 IST)
ಬೆಂಗಳೂರು: ಮೊದಲ ರಾತ್ರಿ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿ ಮರೆಯಲಾಗದ ರಾತ್ರಿಯಾಗಿರುತ್ತದೆ. ಈ ದಿನ ಒಬ್ಬ ಮಹಿಳೆ ತನ್ನ ಗಂಡನಿಂದ ಬಯಸುವುದು ಏನನ್ನು ಗೊತ್ತಾ?

ಭರವಸೆ
ಮೊದಲ ರಾತ್ರಿ ದಿನವೇ ಸೆಕ್ಸ್ ಮಾಡಬೇಕೆಂದೇನಿಲ್ಲ. ಮಹಿಳೆ ಸಾಮಾನ್ಯವಾಗಿ ಗಂಡನಿಂದ ಬಯಸುವುದು ಭರವಸೆಯ ಮಾತು, ಆಸರೆಯನ್ನು. ಈತನೊಂದಿಗೆ ನನಗೆ ಜೀವನ ಪೂರ್ತಿ ಖುಷಿಯಾಗಿರಬಹುದು ಎಂಬ ಭರವಸೆ ಆಕೆಗೆ ನೀಡಬೇಕು.

ಮನಸಾರೆ ನಗು
ತುಂಟ ಮಾತು, ನಗು ಆಕೆಯನ್ನು ಅರಳಿಸಬಹುದು. ಮತ್ತು ನಿಮ್ಮ ಮೂಡ್ ಕೂಡಾ ಬದಲಾಯಿಸಬಹುದು. ಅದರಿಂದ ಇಬ್ಬರೂ ಒಬ್ಬರಿಗೊಬ್ಬರು ಅರ್ಥ ಮಾಡಿಕೊಳ್ಳಲು ಸುಲಭವಾಗುತ್ತದೆ.

ಮೆಚ್ಚುಗೆ
ಮೊದಲ ರಾತ್ರಿಯಂದೇ ಆಕೆಯ ದೇಹ ಸೌಂದರ್ಯದ ಬಗ್ಗೆ ಬೇಡದ ಕಾಮೆಂಟ್ ಮಾಡಬೇಡಿ. ಸಭ್ಯವಾಗಿ ನಡೆದುಕೊಳ್ಳಿ ಮತ್ತು ಆಕೆಯ ಸೌಂದರ್ಯಕ್ಕೊಂದು ಮೆಚ್ಚುಗೆ ಕೊಡಿ.

ರೊಮ್ಯಾನ್ಸ್
ಒಂದು ವೇಳೆ ರೊಮ್ಯಾನ್ಸ್ ಮಾಡುವುದಿದ್ದರೂ ತೀರಾ ಒರಟಾಗಿ ನಡೆದುಕೊಳ್ಳಬೇಡಿ. ಈ ದಿನ ನೀವು ಎಷ್ಟು ಮೃದುವಾಗಿ ನಡೆದುಕೊಳ್ಳುತ್ತೀರೋ ಅಷ್ಟೇ ನಿಮ್ಮ ಸೆಕ್ಸ್ ಲೈಫ್ ಕೂಡಾ ಚೆನ್ನಾಗಿರುತ್ತದೆ ಎನ್ನುವುದನ್ನು ಮರೆಯಬೇಡಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ