ಬೆಂಗಳೂರು: ಮನೆಗೆ ಹೋದರೆ ಸಾಕು ಪತ್ನಿಯ ಕಿರಿ ಕಿರಿ ಅನ್ನುವವರು ಈ ಸುದ್ದಿ ಓದಲೇಬೇಕು. ಸದಾ ಸಿಡಿಮಿಡಿಗೊಳ್ಳುವ ಪತ್ನಿಯನ್ನು ಹೇಗೆ ಸಂಭಾಳಿಸಬೇಕು? ಇದನ್ನು ಓದಿ!
ಸಮಾಧಾನವಾಗಿದ್ದಾಗ ಮಾತನಾಡಿ
ಯಾವಾಗಲೋ ಒಂದು ಹೊತ್ತಿನಲ್ಲಿ ಆಕೆ ಸಮಾಧಾನವಾಗಿದ್ದಾಗ ಆಕೆಯ ಜತೆ ತಾಳ್ಮೆಯಿಂದ ಮಾತನಾಡಿ, ಕೋಪಕ್ಕೆ ಕಾರಣ ತಿಳಿದುಕೊಳ್ಳಿ. ಕಾರಣ ಪತ್ತೆ ಮಾಡಿ ಅದಕ್ಕೆ ಬೇಕಾದ ಪರಿಹಾರ ಕಂಡುಕೊಳ್ಳಿ.
ಕೆಲಸದ ಒತ್ತಡ
ಪುರುಷರಿಗೆ ತಾವು ಹೊರಗಡೆ ಕಚೇರಿಯಲ್ಲಿ ದುಡಿಯುವ ಕೆಲಸವೇ ಅತ್ಯಂತ ಒತ್ತಡದಾಯಕ. ಮನೆಯಲ್ಲಿರುವ ಹೆಣ್ಣು ಮಕ್ಕಳಿಗೆ ಆರಾಮ ಎನ್ನುವ ಮನೋಭಾವನೆಯಿರುತ್ತದೆ. ಆದರೆ ಅದು ತಪ್ಪು. ಮನೆಗೆಲಸ, ನಿಮ್ಮ ಕೆಲಸಗಳು, ಮಕ್ಕಳ ಶಾಲೆ ಕೆಲಸ, ಹೀಗೆ ಪತ್ನಿಯ ಮನದಲ್ಲಿ ಹಲವಾರು ಚಿಂತೆಗಳು, ಒತ್ತಡಗಳಿರುತ್ತವೆ. ಸಾಧ್ಯವಾದಷ್ಟು ಆಕೆಯ ಕೆಲಸದಲ್ಲಿ ನೆರವಾಗಿ.
ಆಕೆಯನ್ನು ಉದಾಸೀನ ಮಾಡಬೇಡಿ
ಕೆಲವೊಮ್ಮೆ ಅಯ್ಯೋ ಪಾಪ ಎನ್ನುವುದೂ ಕೆಲಸ ಮಾಡುತ್ತದೆ! ಆಕೆಯ ಕಾರ್ಯದೊತ್ತಡದ ಬಗ್ಗೆ ಅನುಕಂಪ ವ್ಯಕ್ತಪಡಿಸಿ. ಇದರಿಂದ ತನ್ನ ಬಗ್ಗೆ ಗಂಡ ಕಾಳಜಿ ವಹಿಸುತ್ತಾನೆ ಎಂಬ ಭಾವನೆ ಬಂದು ಕೋಪ ಮಾಡಿಕೊಳ್ಳುವುದು ಕಡಿಮೆಯಾಗಬಹುದು.
ಬೇರೆಯವರ ಮುಂದೆ ಹೀಯಾಳಿಸಬೇಡಿ
ನಿಮ್ಮ ನಡುವೆ ಅದೆಂಥದ್ದೇ ಭಿನ್ನಾಭಿಪ್ರಾಯಗಳಿದ್ದರೂ ಬೇರೆಯವರ ಮುಂದೆ ಆಕೆಯನ್ನುತೆಗಳಬೇಡಿ. ಪ್ರತಿಯೊಬ್ಬ ಹೆಣ್ಣುಮಕ್ಕಳೂ ತಮ್ಮ ಗಂಡ ತಮ್ಮನ್ನು ಯಾರ ಮುಂದೆಯೂ ಬಿಟ್ಟುಕೊಡಬಾರದು ಎಂಬ ಭಾವನೆ ಹೊಂದಿರುತ್ತಾರೆ.
ಕೋಪ ಬಂದರೆ ತಮಾಷೆ ಮಾಡಿ
ಆಕೆ ಕೋಪದಿಂದ ಸಿಡಿಮಿಡಿಗುಡುತ್ತಿರುವಾಗ ನೀವೂ ತಿರುಗೇಟು ಕೊಟ್ಟರೆ ಪರಿಸ್ಥಿತಿ ಕೈ ಮೀರಬಹುದು. ಅಣ್ಣಾವ್ರು ಹೇಳಿಲ್ಲವೇ ಸತ್ಯಭಾಮೆ ಕೋಪ ಏಕೆ ನನ್ನಲ್ಲಿ? ಎಂಬ ಹಾಡನ್ನು? ಅದೇ ರೀತಿ ಕೋಪ ಬಂದಾಗ ತಮಾಷೆ ಮಾಡಿ ಆಕೆಯನ್ನು ಒಲಿಸಿಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.