ಅಕ್ಕಿ ಚಕ್ಕುಲಿ

ಬೇಕಾಗುವ ಸಾಮಾಗ್ರಿ:

ಅಕ್ಕಿ ಹುಡಿ- 340 ಗ್ರಾಂ
ಕಡಲೆ ಬೇಳೆ ಹುಡಿ -120 ಗ್ರಾಂ
ಎಳ್ಳು -1 ಟೀ ಚಮಚ
ಮೆಣಸಿನ ಹುಡಿ- 3 ಟೀ ಚಮಚ
ಇಂಗು- 1/2 ಟೇಬಲ್ ಚಮಚ
ಎಣ್ಣೆ -ಹುರಿಯಲು ಬೇಕಾಗುವಷ್ಟು
ಉಪ್ಪು- ರುಚಿಗೆ ತಕ್ಕಷ್ಟು

ವಿಧಾನ:

ಅಕ್ಕಿ ಹುಡಿ, ಕಡಲೆ ಬೇಳೆ ಹುಡಿಯನ್ನು ಚೆನ್ನಾಗಿ ಕಲಸಿ, ಅದಕ್ಕೆ ಮೆಣಸಿನ ಹುಡಿ, ಇಂಗು ಮತ್ತು ಉಪ್ಪನ್ನು ಸೇರಿಸಿ. ಎಳ್ಳು ಕಾಳನ್ನು ತೊಳೆದು ಈ ಮಿಶ್ರಣದೊಂದಿಗೆ ಬೆರೆಸಿ. ಸ್ವಲ್ಪ ನೀರು ಸೇರಿಸಿ ಹಿಟ್ಟನ್ನು ಮೃದುವಾಗಿ ಅಂಟು ಬರುವಂತೆ ಮಾಡಿ. ಸ್ವಲ್ಪ ಸ್ವಲ್ಪ ಹಿಟ್ಟನ್ನು ಚಕ್ಕುಲಿಯ ಎರಕದ ಅಚ್ಚು ಬಳಸಿ, ನಿಧಾನವಾಗಿ ಬಾಣಲೆಯಲ್ಲಿರುವ ಕುದಿಯುವ ಎಣ್ಣೆಗೆ ಹಾಕುತ್ತಿರಿ. ಚಕ್ಕುಲಿ ಕಂದು ಬಣ್ಣಕ್ಕೆ ತಿರುಗಿದ ನಂತರ ಹೊರತೆಗೆಯಿರಿ.

ವೆಬ್ದುನಿಯಾವನ್ನು ಓದಿ