ಗರಿ ಗರಿ ಚಕ್ಕುಲಿ

ಶುಕ್ರವಾರ, 3 ಜನವರಿ 2014 (13:37 IST)
PR

ಸಾಮಾನ್ಯವಾಗಿ ಚಳಿಗಾಲದಲ್ಲಿ ಬಿಸಿಬಿಸಿಯಾಗಿ ಏನನ್ನಾದರೂ ಸೇವಿಸ ಬೇಕು ಎನ್ನುವ ಆಸೆ ಆಗುತ್ತಲೇ ಇರುತ್ತದೆ. ಆದರೆ ಹೊರಗಿನ ತಿಂಡಿ ಆರೋಗ್ಯಕ್ಕೆ ಹಾನಿಕರ. ಮನೆಯಲ್ಲಿ ಏನು ಮಾಡುವುದು ಎಂದು ಗೊಂದಲ ಕಾಡುವುದು ಸಹಜ. ನಿಮ್ಮ ಸಮಸ್ಯೆ ದೂರ ಮಾಡಲು ಇಲ್ಲಿ ಗರಿಗರಿಯಾದ ಚಕ್ಕುಲಿ ಮಾಡುವ ಬಗ್ಗೆ ತಿಳಿಸಲಾಗಿದೆ. ಇನ್ನೇಕೆ ತಡ ಬೇಕಾದ ಸಾಮಗ್ರಿಗಳು ಮತ್ತು ಮಾಡುವ ವಿಧಾನವನ್ನು ನಾಟ್ ಮಾಡಿಕೊಂಡು ತಿನಿಸನ್ನು ತಯಾರಿಸಿ ಎಂಜಾಯ್ ಮಾಡಿ !
ಬೇಕಾಗುವ ಸಾಮಗ್ರಿಗಳು :

ಅಕ್ಕಿ ಹಿಟ್ಟು -ಒಂದು ಕಪ್ , ಹುರಿಗಡಲೆ ಹಿಟ್ಟು -ಮೂರು ಟೀ ಚಮಚ, ಎಳ್ಳು ಸ್ವಲ್ಪ,ಇಂಗು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು,ಕರೆಯಲು ಎಣ್ಣೆ .

ಮಾಡುವ ವಿಧಾನ: ಅಕ್ಕಿಹಿಟ್ಟನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಹುರಿಗಡಲೆ ಹಿಟ್ಟು, ಎಳ್ಳು,ಇಂಗು,ಉಪ್ಪು ಮತ್ತು ಸ್ವಲ್ಪ ಎಣ್ಣೆ ಹಾಗೂ ನೀರು ಹಾಕಿ ಕಲಸಿಟ್ಟು ನಂತರ ಚಕ್ಕುಲಿಯ ಒರಳಿನಲ್ಲಿ ಒತ್ತಿ ಎಣ್ಣೆಯಲ್ಲಿ ಕರಿಯಬೇಕು.

ವೆಬ್ದುನಿಯಾವನ್ನು ಓದಿ