ನಿಂಬೆ ಗಾತ್ರದ ಹುಣಸೇಹಣ್ಣು ಸಣ್ಣ ಟೊಮೆಟೋ - 1 ಜೀರಿಗೆ ಪುಡಿ - 2 ಚಮಚ ಕರಿಮೆಣಸಿನ ಪುಡಿ - 1 ಚಮಚ ತುಪ್ಪ - 1 ಚಮಚ ಹಿಂಗು - ಸ್ವಲ್ಪ ಉಪ್ಪು - ಸ್ವಲ್ಪ ಸಾಸಿವೆ - ಅರ್ಧ ಚಮಚ ಕರಿಬೇವಿನ ಸೊಪ್ಪು
ಪಾಕ ವಿಧಾನ: ಹುಣಸೇ ಹಣ್ಣನ್ನು ಐದು ನಿಮಿಷ ನೀರಿನಲ್ಲಿ ನೆನೆಸಿಟ್ಟು ನಂತರ ಅದರ ರಸವನ್ನೆಲ್ಲಾ ತೆಗೆಯಿರಿ. ಈ ರಸವನ್ನು ಒಂದು ಪಾತ್ರೆಯಲ್ಲಿ ಹಾಕಿ ಇದಕ್ಕೆ ಒಂದು ಲೋಟ ನೀರು, ಸಣ್ಣಗೆ ಹೆಚ್ಚಿದ ಟೊಮ್ಯಾಟೋ, ಉಪ್ಪು ಮತ್ತು ಇಂಗು ಸೇರಿಸಿ ಸಣ್ಣ ಉರಿಯಲ್ಲಿಡಿ. ಒಂದು ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ ಇದಕ್ಕೆ ಸಾಸಿವೆ ಹಾಕಿ. ಅದು ಸಿಡಿದ ನಂತರ ಜೀರಿಗೆಪುಡಿ, ಕರಮೆಣಸು ಮತ್ತು ಕರಿಬೇವಿನ ಎಲೆಯನ್ನು ಹಾಕಿ. ಇದನ್ನು ಹುಣಸೇ ನೀರಿಗೆ ಸೇರಿಸಿ. ನಂತರ ಇನ್ನೊಂದು ಲೋಟ ನೀರು ಸೇರಿಸಿ ಸಣ್ಣ ಉರಿಯಲ್ಲಿ ಐದು ನಿಮಿಷ ಕುದಿಸಿ.