ಟೊಮೇಟೊ ಚಿತ್ರಾನ್ನ

ಟೊಮೇಟೊ ಚಿತ್ರಾನ್ನ
ಬೇಕಾಗುವ ಸಾಮಗ್ರಿಗಳು: ಅಕ್ಕಿ, ಕಡಲೆ ಬೇಳೆ, ಉದ್ದಿನ ಬೇಳೆ, ಸಾಸಿವೆ-, ಜೀರಿಗೆ, ತುಪ್ಪ, ನಾಲ್ಕು ಟೊಮ್ಯಾಟೋ, ಶುಂಠಿ, ತೆಂಗಿನಕಾಯಿ ತುರಿ, ಉಪ್ಪು, ಕರಿಬೇವು, -ಕೊತ್ತಂಬರಿ, ಹಸಿಮೆಣಸಿನಕಾಯಿ.
ಮಾಡುವ ವಿಧಾನ: ಮೊದಲು ಪಾತ್ರೆಗೆ ತುಪ್ಪ ಹಾಕಿ ಬಿಸಿ ಮಾಡಿ. ಬಿಸಿಯಾದ ಮೇಲೆ ಅದಕ್ಕೆ ಅವಶ್ಯವಿದ್ದಷ್ಟು ಕಡಲೆ ಬೇಳೆ, ಉದ್ದಿನ ಬೇಳೆ, ಹೆಚ್ಚಿದ ಹಸಿಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ. ಐದು ನಿಮಿಷದ ನಂತರ ಶುಂಠಿ, ತೆಂಗಿನಕಾಯಿ ತುರಿ, ಕರಿಬೇವು, -ಕೊತ್ತಂಬರಿಗಳನ್ನು ಹಾಕಿ . ನೀರಿನಲ್ಲಿ ತೊಳೆದಿಟ್ಟುಕೊಂಡ ಅಕ್ಕಿ ಗೆ ತಕ್ಕಷ್ಟು ನೀರು ಹಾಕಿ. ಪಾತ್ರೆಯ ಬಾಯಿ ಮುಚ್ಚಿ. ಅನ್ನ ಆಗುತ್ತಿದ್ದಂತೆ ಅದಕ್ಕೆ ಟೊಮೆಟೊ, ಸಾಸಿವೆ, ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ ಬೇಯಲು ಬಿಡಿ. ಬಿಸಿ ಇರುವಾಗಲೆ ತಿಂದರೆ ರುಚಿಕರ.

ವೆಬ್ದುನಿಯಾವನ್ನು ಓದಿ