ಪಡವಲ ಕಾಯಿಯನ್ನು ಹೆಚ್ಚಿಕೊಳ್ಳಿ. ಕಡಲೆ ಬೇಳೆಯ ಉರುಟು ಹಿಟ್ಟನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ. ಎಣ್ಣೆಯಲ್ಲಿ ಖಾರದ ಪುಡಿ, ಉಪ್ಪು, ಸಕ್ಕರೆ ಅರಿಸಿನ ಪುಡಿ, ನಿಂಬೆರಸ ಹಾಕಿ ಚೆನ್ನಾಗಿ ಕಲಿಸಿರಿ. ಆ ಮಿಶ್ರಣಕ್ಕೆ ಹವೀಜ, ಜೀರಿಗೆ, ಕೊಬ್ರಿ, ಶೇಂಗಾದ ಪುಡಿ ಸೇರಿಸಿ. ಕಡಲೆ ಹಿಟ್ಟಿನ ತುರಿಯನ್ನು ಅದರಲ್ಲಿ ಬೆರಿಸಿ. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಅದಕ್ಕೆ ಸೇರಿಸಿ. ಅನಂತರ ಎಲ್ಲವನ್ನು ಕೂಡಿಸಿ, ಕಲಿಸಿ, ಆವಿಯಲ್ಲಿ ಬೇಯಿಸಿ ಒಗ್ಗರಣೆ ಹಾಕಿ. ಹೆಚ್ಚಿಕೊಂಡ ಪಡವಲ ಕಾಯಿಯ ಬಿಲ್ಲೆಯನ್ನು ಈ ಒಗ್ಗರಣೆಗೆ ಹಾಕಿ ಕಲೆಸಿದರೆ ಪಡವಲಕಾಯಿ ಪಲ್ಯ ರೆಡಿ.