ಬದನೆ ದೋಸೆ

ಬೇಕಾಗುವ ಸಮಾಗ್ರಿಗಳು : ಅಕ್ಕಿ ಎರಡು ಕಪ್, ತೆಂಗಿನ ತುರಿ 3/4 ಕಪ್, ಹುಣಸೆ ಹಣ್ಣು ಒಂದು ಗೋಲಿ ಅಳತೆ, ಬೆಲ್ಲ ಚಿಕ್ಕ ನಿಂಬೆ ಗಾತ್ರದ್ದು, ಉಪ್ಪು ರುಚಿಗೆ ತಕ್ಕಷ್ಟು, ಕೊತ್ತಂಬರಿ ಕಾಳು ಒಂದು ದೊಡ್ಡ ಚಮಚ, ಮೆಣಸು 4-5, ಅರಸಿನ ಪುಡಿ 1/4 ಟಿ ಸ್ಪೂನ್. ಪಾಕ ವಿಧಾನ : ಬದನೆಯನ್ನು ಚಿಪ್ಸ್‌ಗೆ ಬೇಕಿರುವ ಮಾದರಿಯಲ್ಲಿ ತುಂಬ ತೆಳುವಾಗಿ ಕತ್ತರಿಸಿ ನೀರಿನಲ್ಲಿ ಹಾಕಿಡಿ. ಅಕ್ಕಿಯೊಂದಿಗೆ ಉಳಿದ ಸಾಮಾನುಗಳನ್ನು ರುಬ್ಬಿ. ದೋಸೆಕಾವಲಿಯನ್ನು ಒಲೆಯಮೇಲಿಟ್ಟು ಎಣ್ಣೆ ಸವರಿ. ಅದು ಕಾದ ಬಳಿಕ ಬದನೆಯ ಹೋಳುಗಳನ್ನು ರುಬ್ಬಿದ ಹಿಟ್ಟಿನಲ್ಲಿ ಮುಳುಗಿಸಿ ಕಾವಲಿಯತುಂಬ ದೋಸೆಯ ಹಾಗೆ ಇರಿಸಿ. ಮೇಲೆ ಸ್ವಲ್ಪ ಹಿಟ್ಟನ್ನು ಸವರಿ ಎಣ್ಣೆ ಹಾಕಿ ಎರಡೂ ಕಡೆ ಚೆನ್ನಾಗಿ ಕಾಯಿಸಿ. ಬೇರೆಯೇ ರುಚಿಯ ದೋಸೆ ತಿನ್ನಲು ಚೆನ್ನಾಗಿರುತ್ತದೆ.

ವೆಬ್ದುನಿಯಾವನ್ನು ಓದಿ