ಬೀಟ್‌ರೂಟ್ ರಸಂ

ಬೇಕಾಗುವ ಸಾಮಾಗ್ರಿಗಳು:

ಮಧ್ಯಮ ಗಾತ್ರದ ಬೀಟ್‌ರೂಟ್ - 1
ಹುಣಸೇ ಹಣ್ಣು - ಸಣ್ಣ ಲಿಂಬೆ ಗಾತ್ರದ್ದು
ತುರಿದ ತೆಂಗಿನ ಕಾಯಿ - 4 ಚಮಚ
ಮೆಂತೆ - ಅರ್ಧ ಚಮಚ
ಉದ್ದು ಬೇಳೆ - ಅರ್ದ ಚಮಚ
ಜೀರಿಗೆ - ಅರ್ಧ ಚಮಚ
ಕೊತ್ತಂಬರಿ ಬೀಜ - ಅರ್ಧ ಚಮಚ
ಕರಿಬೇವಿನ ಎಲೆ - 2
ಹಿಂಗು - ಕಾಲು ಚಮಚ
ಕೆಂಪು ಮೆಣಸು - 5-6
ತೆಂಗಿನೆಣ್ಣೆ - ಸ್ವಲ್ಪ
ಅರಶಿನ ಪುಡಿ - ಸ್ವಲ್ಪ
ಬೆಲ್ಲ - ಸಣ್ಣ ತುಂಡು

ಪಾಕ ವಿಧಾನ: ಬೀಟ್‌ರೂಟ್‌ನ ಸಿಪ್ಪೆ ತೆಗೆದು ಕುಕ್ಕರಿನಲ್ಲಿ ಚೆನ್ನಾಗಿ ಬೇಯಿಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಇದಕ್ಕೆ ಹಿಂಗು ಮತ್ತು ಮೆಂತೆಯನ್ನು ಸೇರಿಸಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಇದಕ್ಕೆ ಉದ್ದುಬೇಳೆ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. ಉದ್ದು ಬೇಳೆಯು ಕಂದುಬಣ್ಣಕ್ಕೆ ತಿರುಗಿದ ನಂತರ, ಜೀರಿಗೆಯನ್ನು ಸೇರಿಸಿ. ನಂತರ ಕೆಂಪು ಮೆಣಸು ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಕೊತ್ತಂಬರಿ ಬೀಜ ಸೇರಿಸಿ ಸ್ವಲ್ಪ ಹೊತ್ತು ಹುರಿದ ನಂತರ ತುರಿದ ತೆಂಗಿನಕಾಯಿ ಮತ್ತು ಕರಿಬೇವಿನ ಎಲೆಯನ್ನು ಸೇರಿಸಿ. ಇನ್ನೊಂದು ಪಾತ್ರೆಯಲ್ಲಿ ಹುಣಸೇ ಹಣ್ಣಿನ ರಸ ತೆಗೆದು, ಅದಕ್ಕೆ ಸ್ವಲ್ಪ ಅರಶಿನ ಪುಡಿ ಮತ್ತು ಸ್ವಲ್ಪ ಉಪ್ಪು ಮತ್ತು ಸಣ್ಣ ತುಂಡು ಬೆಲ್ಲ ಸೇರಿಸಿ ಬೇಯಲು ಇಡಿ. ಹುರಿದ ಮಸಾಲಾವನ್ನು ಬೇಯಿಸಿದ ಬೀಟ್‌ರೂಟ್‌ ಜೊತೆ ಚೆನ್ನಾಗಿ ರುಬ್ಬಿ. ರುಬ್ಬಿದ ಮಿಶ್ರಣವನ್ನು ಬೇಯುತ್ತಿರುವ ಹುಣಸೇ ರಸಕ್ಕೆ ಸೇರಿಸಿ. ಸ್ವಲ್ಪ ಹೊತ್ತು ಬೆಂದ ನಂತರ, ಇದಕ್ಕೆ ಕರಿಬೇವಿನ ಎಲೆ ಮತ್ತು 1 ಚಮಚ ತೆಂಗಿನೆಣ್ಣೆ ಸೇರಿಸಿ.

ವೆಬ್ದುನಿಯಾವನ್ನು ಓದಿ